ಮೈಸೂರು: ‘ದಕ್ಷಿಣ ಕರ್ನಾಟಕದ ನಾಲ್ಕು ಟಿಬೆಟಿಯನ್ ವಸತಿ ಕೇಂದ್ರಗಳ ಆಯೋಜನಾ ಸಮಿತಿಗಳಿಂದ ಜುಲೈ 19 ಮತ್ತು 20ರಂದು ನಗರದ ಕಲಾಮಂದಿರದಲ್ಲಿ ಧರ್ಮಗುರು ದಲೈಲಾಮಾ ಅವರ 90ನೇ ಜನ್ಮದಿನೋತ್ಸವ ಪ್ರಯುಕ್ತ ‘ಟಿಬೆಟ್ ಹಬ್ಬ’ ಆಯೋಜಿಸಲಾಗಿದೆ’ ಎಂದು ಬೈಲಕುಪ್ಪೆ ಸೆಟಲ್‌ಮೆಂಟ್ ಅಧಿಕಾರಿ ಗೆಲೆಕ್ ತಿಳಿಸಿದರು.
ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘19ರಂದು ಬೆಳಿಗ್ಗೆ 9ಕ್ಕೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಟಿಬೆಟಿಯನ್ ಆಧ್ಯಾತ್ಮಿಕತೆ, ಕಲೆ, ಸಾಂಸ್ಕೃತಿಕ ಪರಂಪರೆಯ ಪ್ರದರ್ಶನ ನಡೆಯಲಿದೆ. 20ರಂದು ಸಂಜೆ 6ಕ್ಕೆ ಗೃಹಸಚಿವ ಜಿ.ಪರಮೇಶ್ವರ್ ಉಪಸ್ಥಿತಿಯಲ್ಲಿ ಸಮಾರೋಪ ನಡೆಯಲಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ’ ಎಂದು ಮಾಹಿತಿ ನೀಡಿದರು.
‘ಬೈಲಕುಪ್ಪೆ, ಹುಣಸೂರು, ಕೊಳ್ಳೇಗಾಲ ಟಿಬೆಟಿಯನ್ ಶಿಬಿರಗಳಿಂದ 400 ಮಂದಿ ಪಾಲ್ಗೊಳ್ಳಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಸಂಸ್ಕೃತಿ ಅರಿಯಬೇಕು’ ಎಂದು ಕೋರಿದರು.
ಸೆಟ್ಲ್‌ಮೆಂಟ್ ಅಧಿಕಾರಿ ಚಿಮೆ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.