ADVERTISEMENT

ಹುಲಿ ದಾಳಿಯಿಂದ ಹಸುವಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2019, 14:08 IST
Last Updated 29 ಸೆಪ್ಟೆಂಬರ್ 2019, 14:08 IST
ಹುಣಸೂರು ತಾಲ್ಲೂಕಿನ ಕಚುವಿನಹಳ್ಳಿ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಚಿತ್ರ.
ಹುಣಸೂರು ತಾಲ್ಲೂಕಿನ ಕಚುವಿನಹಳ್ಳಿ ಗ್ರಾಮದಲ್ಲಿ ಹುಲಿ ಪ್ರತ್ಯಕ್ಷವಾಗಿ ಜಾನುವಾರುಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ ಚಿತ್ರ.   

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಅಂಚಿನ ಕಚುವಿನಹಳ್ಳಿ ಗ್ರಾಮದ ಚಿಕ್ಕಣ್ಣಯ್ಯ ಎಂಬುವವರ ಹೊಲದಲ್ಲಿ ಹುಲಿ ಮೇಲೆ ದಾಳಿಯಿಂದ ಹಸು ಗಾಯಗೊಂಡಿದೆ.

ಭಾನುವಾರ ಮಧ್ಯಾಹ್ನ ದನಗಾಹಿಗಳು ಜಾನುವಾರುಗಳನ್ನು ಹೊಲದಲ್ಲಿ ಮೇಯಿಸುತ್ತಿದ್ದ ಸಮಯದಲ್ಲಿ ಪೊದೆಯಿಂದ ಹುಲಿ ದಾಳಿ ನಡೆಸಿ ಬೇಟೆಗೆ ಯತ್ನಿಸಿದೆ. ಈ ಸಮಯದಲ್ಲಿ ದನಗಾಹಿಗಳು ಕೂಗಾಡಿದ್ದರಿಂದ ಹುಲಿ ಓಡಿ ಹೋಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಈ ವಿಷಯವನ್ನು ನಾಗರಹೊಳೆ ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿಗಳ ಗಮನಕ್ಕೆ ತಂದು ಹುಲಿ ಸೆರೆ ಹಿಡಿಯುವಂತೆ ನೇರಳಕುಪ್ಪೆ ಗ್ರಾಮ ಪಂಚಾಯಿತಿ ಸದಸ್ಯೆ ಸುಂದರಮ್ಮ ಮಹದೇವ್‌ ಆಗ್ರಹಿಸಿದ್ದಾರೆ.

ADVERTISEMENT

ಈ ಭಾಗದ ತರಗನ್ ಎಸ್ಟೇಟ್‌ ನಲ್ಲಿ ಹುಲಿ ಅಡಗಿದೆ ಎಂದು ಅರಣ್ಯ ಇಲಾಖೆ ಒಂದು ತಿಂಗಳು ಕಾರ್ಯಾಚರಣೆ ನಡೆಸಿದ್ದರೂ ಹುಲಿ ಸೆರೆ ಸಿಗಲಿಲ್ಲ. ಹಾಗಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.