ADVERTISEMENT

ಅನಾರೋಗ್ಯದಿಂದ ಗಂಡು ಹುಲಿ ಸಾವು

BANDIPUR FOREST

​ಪ್ರಜಾವಾಣಿ ವಾರ್ತೆ
Published 22 ಜುಲೈ 2020, 9:26 IST
Last Updated 22 ಜುಲೈ 2020, 9:26 IST
ಮೃತಪಟ್ಟ ಗುಂಡು ಹುಲಿ
ಮೃತಪಟ್ಟ ಗುಂಡು ಹುಲಿ   

ಸರಗೂರು (ಮೈಸೂರು): ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಬರುವ ಎನ್.ಬೇಗೂರು ವಲಯದ ಕಡತಾಲು ಕಟ್ಟೆ ಬಳಿ, ಎಂಟು ವರ್ಷದ ಗಂಡು ಹುಲಿಯೊಂದು ಅನಾರೋಗ್ಯದಿಂದ ಮೃತಪಟ್ಟಿದೆ.

ಅರಣ್ಯ ಸಿಬ್ಬಂದಿ ಭಾನುವಾರ ರಾತ್ರಿ ಗಸ್ತು ತಿರುಗುತ್ತಿದ್ದಾಗ ಇದು ಗಮನಕ್ಕೆ ಬಂದಿದೆ.

‘ಈ ಹುಲಿಯು ಅನಾರೋಗ್ಯಕ್ಕೆ ಒಳಗಾಗಿತ್ತು. ಹೀಗಾಗಿ, ಆಹಾರ ಸೇವಿಸಿರಲಿಲ್ಲ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ತಿಳಿಸಿದ್ದಾರೆ.

ADVERTISEMENT

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕಳೇಬರವನ್ನು ಸೋಮವಾರ ಸುಟ್ಟುಹಾಕಲಾಗಿದೆ.

ಕಂಬಿಗೆ ಗುದ್ದಿದ ಆನೆ: ಎನ್.ಬೇಗೂರು ವಲಯಕ್ಕೆ ಹೊಂದಿಕೊಂಡಿರುವ ಅರಣ್ಯ ವ್ಯಾಪ್ತಿಯಲ್ಲಿ ಆನೆಯೊಂದು, ರೈಲ್ವೆ ಕಂಬಿಯಿಂದ ನಿರ್ಮಾಣವಾಗಿರುವ ಬೇಲಿಗೆ ಗುದ್ದುತ್ತಿರುವ ವಿಡಿಯೊ ಹರಿದಾಡುತ್ತಿದೆ. ‌

ನಿತ್ಯವು ತಾನು ಸಂಚರಿಸುತ್ತಿದ್ದ ರಸ್ತೆ ಬಂದ್‌ ಆಯಿತೆಂದು, ಈ ಆನೆಯು ತನ್ನ ಕೋಪವನ್ನು ಕಂಬಿಗೆ ಗುದ್ದುವ ಮೂಲಕ ತೋರಿಸಿರಬಹುದು ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.