ADVERTISEMENT

‘ಟಿಪ್ಪು ನಿಜ ಕನಸುಗಳು’: 20ರಿಂದ ನಾಟಕ ಪ್ರದರ್ಶನ

ಟಿಪ್ಪುವಿನ ನಿಜ ಸ್ವರೂಪ ಬಯಲಿಗೆಳೆಯುವುದೇ ಉದ್ದೇಶ: ಅಡ್ಡಂಡ ಕಾರ್ಯಪ್ಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 21:13 IST
Last Updated 5 ನವೆಂಬರ್ 2022, 21:13 IST
ಅಡ್ಡಂಡ ಸಿ.ಕಾರ್ಯ‍ಪ್ಪ
ಅಡ್ಡಂಡ ಸಿ.ಕಾರ್ಯ‍ಪ್ಪ   

ಮೈಸೂರು: ‘ಸತ್ಯ ಚರಿತ್ರೆಯ ಅನಾವರಣಕ್ಕಾಗಿ ರಚಿಸಿರುವ ‘ಟಿಪ್ಪುವಿನ ನಿಜ ಕನಸುಗಳು’ ನಾಟಕ ಕೃತಿಯನ್ನು ವನರಂಗದಲ್ಲಿ ಡಾ.ಎಸ್‌.ಎಲ್‌.ಭೈರಪ್ಪ ನ.13ರಂದು ಬಿಡುಗಡೆ ಮಾಡಲಿದ್ದಾರೆ. ನ.20ರಿಂದ ಭೂಮಿಗೀತದಲ್ಲಿ ರಂಗಪ್ರಸ್ತುತಿ ನಡೆಯಲಿದೆ’ ಎಂದು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ
ತಿಳಿಸಿದರು.

‘ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸದ ಪ್ರತಾಪಸಿಂಹ, ಸಾಮಾಜಿಕ ಕಾರ್ಯಕರ್ತ ವಾದಿರಾಜ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಲೇಖಕ ರೋಹಿತ್‌ ಚಕ್ರತೀರ್ಥ ಕೃತಿ ಕುರಿತು ಮಾತನಾಡಲಿದ್ದಾರೆ. ರಾಜ್ಯದಾದ್ಯಂತ 100 ಪ್ರದರ್ಶನ ನೀಡುವ ಉದ್ದೇಶವಿದೆ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ರಂಗಾಯಣದಿಂದ ಈ ಬಾರಿಯ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ವನ್ನು ಡಿ.8ರಿಂದ 15ರವರೆಗೆ ನಡೆಸಲು ನಿರ್ಧರಿಸಲಾಗಿದ್ದು, ‘ಭಾರತೀಯತೆ’ ವಸ್ತುವಿಷಯದ ಮೇಲೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ’ ಎಂದು ‌
ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.