ADVERTISEMENT

ಹುಣಸೂರು| ಜೇನುಕುರುಬರ ಆರಾಧನಾ ಸ್ಥಳಕ್ಕೆ ಹಾನಿ: ಆರೋಪ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 7:13 IST
Last Updated 13 ಅಕ್ಟೋಬರ್ 2025, 7:13 IST
ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಜೇನುಕುರುಬ ಸಮಾಜದ ಆರಾಧನಾ ಸ್ಥಳ ಧ್ವಂಸಗೊಂಡಿರುವುದು
ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಜೇನುಕುರುಬ ಸಮಾಜದ ಆರಾಧನಾ ಸ್ಥಳ ಧ್ವಂಸಗೊಂಡಿರುವುದು   

ಹುಣಸೂರು: ‘ಜೇನುಕುರುಬ ಸಮುದಾಯದವರು ಅರಣ್ಯದಲ್ಲಿ ನೆಲೆಕಟ್ಟಿಕೊಂಡಿದ್ದ ಸಮಯದಲ್ಲಿ ಆರಾಧಿಸುತ್ತಿದ್ದ ಸ್ಥಳವನ್ನು ಅರಣ್ಯ ಇಲಾಖೆ ಉದ್ದೇಶಪೂರ್ವಕವಾಗಿ ಧ್ವಂಸಗೊಳಿಸಿದೆ’ ಎಂದು ನಾಗಾಪುರ ಪುನರ್ವಸತಿ ಕೇಂದ್ರದ ಜೇನುಕುರುಬ ಸಮುದಾಯ ಮುಖಂಡ ಜೆ.ಕೆ.ಮಣಿ ಆರೋಪಿಸಿದ್ದಾರೆ.

ಕೊಡಗು ಜಿಲ್ಲೆ ವೀರಾಜಪೇಟೆ ತಾಲ್ಲೂಕಿನ ತಿತಮತಿ ಪಂಚಾಯಿತಿ ಮಡೆನೂರು, ಬೇಗೂರು ಮತ್ತು ಗಣಗೂರಿನ ಜೇನುಕುರುಬರನ್ನು ಅರಣ್ಯದಿಂದ ಹುಲಿ ಯೋಜನೆ ಹಿನ್ನೆಲೆಯಲ್ಲಿ ಒಕ್ಕಲೇಬ್ಬಿಸಿದ್ದು, ಈ ಅರಣ್ಯದಲ್ಲಿ ನೆಲೆ ಕಟ್ಟಿಕೊಂಡಿದ್ದ ಜೇನುಕುರುಬರ ಆರಾಧನಾ ಸ್ಥಳವನ್ನು ಇಲಾಖೆ ಹಾನಿಮಾಡಿ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ’ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘2000ನೇ ಇಸವಿಯಲ್ಲಿ ಅರಣ್ಯದಿಂದ ಹೊರ ಹಾಕಿದ ಗಿರಿಜನ ವರ್ಷಕ್ಕೆ ಒಮ್ಮೆ ಆರಾಧ್ಯ ದೇವತೆ ಸ್ಥಳಕ್ಕೆ ತೆರಳಿ ಪೂಜೆ ನೆರವೇರಿಸಿ ಬರುವ ವಾಡಿಕೆ ಇತ್ತು. ಯಾವ ಕಾರಣಕ್ಕೆ ಇಲಾಖೆ ಈ ಕೃತ್ಯೆ ನಡೆಸಿದೆ ಎನ್ನುವುದು ತಿಳಿದಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ಜೇನುಕುರುಬ ಸಮುದಾಯದ ಪೂರ್ವಿಕರ ಸ್ಥಳಕ್ಕೆ ಮತ್ತು ದೇವಸ್ಥಾನಕ್ಕೆ ವರ್ಷಕ್ಕೆ ಒಮ್ಮೆ ಭೇಟಿ ನೀಡಿ ಹರಕೆ ಮತ್ತು ಹಿರಿಯರಿಗೆ ಎಡೆ ಇಡುವ ಸಂಪ್ರದಾಯಕ್ಕೆ ಧಕ್ಕೆ ಆಗದ ರೀತಿ ಅರಣ್ಯ ಇಲಾಖೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಗಿರಿಜನರು ಅರಣ್ಯ ಇಲಾಖೆ ಎದುರು ಪ್ರತಿಭಟಿಸಲಿದ್ದೇವೆ’ ಎಂದು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.