ADVERTISEMENT

‘ಪ್ರತಿ ಮನೆಯಲ್ಲೂ ಇಬ್ಬರು ರೋಗಿ’

ಕೇರಳದ ಯುವ ರೈತ ಮಹಿಳೆ ಪವಿತ್ರಾ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2022, 4:46 IST
Last Updated 14 ನವೆಂಬರ್ 2022, 4:46 IST
ಕಿಸಾನ್‌ ಸಮ್ಮೇಳನದಲ್ಲಿ ಭಾನುವಾರ ನಡೆದ ‘ಯುವ ಜನಾಂಗ ಮತ್ತು ಕೃಷಿ’ ಸಂವಾದದಲ್ಲಿ ಯುವ ಕೃಷಿಕರಾದ ಶ್ರೀರೇಖಾ, ಜನಾರ್ಧನ್, ಶ್ರೀಹರ್ಷ ಪವಿತ್ರಾ, ಸೌಮ್ಯಾ ಮಾತನಾಡಿದರು
ಕಿಸಾನ್‌ ಸಮ್ಮೇಳನದಲ್ಲಿ ಭಾನುವಾರ ನಡೆದ ‘ಯುವ ಜನಾಂಗ ಮತ್ತು ಕೃಷಿ’ ಸಂವಾದದಲ್ಲಿ ಯುವ ಕೃಷಿಕರಾದ ಶ್ರೀರೇಖಾ, ಜನಾರ್ಧನ್, ಶ್ರೀಹರ್ಷ ಪವಿತ್ರಾ, ಸೌಮ್ಯಾ ಮಾತನಾಡಿದರು   

ಮೈಸೂರು: ‘ಕೇರಳದ ಪ್ರತಿ ಮನೆಯಲ್ಲೂ ಇಬ್ಬರು ರೋಗಿಗಳಿದ್ದಾರೆ. ಬಹುತೇಕ ಎಲ್ಲ ರಾಜ್ಯಗಳ ಮನೆಮನೆ ಕಥೆಯೂ ಇದೆ ಆಗಿದೆ’ ಎಂದು ಯುವ ರೈತ ಮಹಿಳೆ ಪವಿತ್ರಾ ಹೇಳಿದರು.

ಕಿಸಾನ್ ಸಮ್ಮೇಳನದ ಭಾನುವಾರ ‘ಯುವ ಜನಾಂಗ ಮತ್ತು ಕೃಷಿ’ ಸಂವಾದದಲ್ಲಿ ಅವರು ಮಾತನಾಡಿ, ‘ನಾವು ತಿನ್ನುವ ಆಹಾರ ವಿಷ. ರಾಜ್ಯದ ಪ್ರತಿಮನೆಯಲ್ಲೂ ಇಬ್ಬರು ಮಧುಮೇಹಿಗಳು, ಕ್ಯಾನ್ಸರ್‌, ಕಿಡ್ನಿ ರೋಗ ಪೀಡಿತರಿದ್ದಾರೆ’
ಎಂದರು.

‘ಕ್ಯಾನ್ಸರ್‌ ಕಾರಕಗಳಿರುವ ಆಹಾರವನ್ನು ಬೀದಿಬದಿ, ಮಾಲ್‌ಗಳಲ್ಲಿ ಮೆಲ್ಲುತ್ತಿದ್ದೇವೆ. ಕ್ಯಾನ್ಸರ್‌ನಿಂದ ತಂದೆ ಕಳೆದುಕೊಂಡೆ. ನಮ್ಮ ಕುಟುಂಬಕ್ಕೆ ವ್ಯವಸಾಯ ಭೂಮಿಯೇನೂ ಇರಲಿಲ್ಲ. ಆರೋಗ್ಯಕ್ಕಾಗಿ ಒಂದು ಎಕರೆಯಲ್ಲಿ ಸಾವಯವ ಕೃಷಿ ಆರಂಭಿಸಿದ್ದೇನೆ’ ಎಂದು ತಿಳಿಸಿದರು.

ADVERTISEMENT

ತುಮಕೂರಿನ ಜವನಹಳ್ಳಿಯ ಯುವ ಕೃಷಿಕ ಜನಾರ್ಧನ್ ಮಾತನಾಡಿ, ‘ಉನ್ನತ ಶಿಕ್ಷಣ ಪಡೆದು ಮರಳಿದ ಯುವಕ– ಯುವತಿಯರನ್ನು ಹುಚ್ಚರಂತೆ ಕಾಣಲಾಗುತ್ತಿದೆ. ಆರೋಗ್ಯಯುತ ಆಹಾರ ಎಲ್ಲರ ಹಕ್ಕು. ಹೀಗಾಗಿ ಕೃಷಿಗೆ ಮರಳಿದ್ದೇನೆ’ ಎಂದರು.

‘ಶಿಕ್ಷಣದಲ್ಲಿ ಕೃಷಿಯ ಮಹತ್ವವಿಲ್ಲ. ವಾಸ್ತವಿಕತೆಗೆ ದೂರ ಇರುವ ಶಿಕ್ಷಣವನ್ನು ಪಡೆಯುತ್ತಿದ್ದೇವೆ. ಕೃಷಿಗೆ ಮರಳು ನಿಜವಾದ ಶಿಕ್ಷಣ ನಮಗೇ ಬೇಕು’ ಎಂದು ಶಿಕ್ಷಕಿ ಸೌಮ್ಯಾ ಹೇಳಿದರು.

ಬಿಹಾರದ ರೇಖಾ ಮಾತನಾಡಿ, ‘ದೆಹಲಿಯಲ್ಲಿದ್ದಾಗ ಸಮಸ್ಯೆಯೊಂದಕ್ಕೆ ಸಿಲುಕಿ ಸಾಯುವ ನಿರ್ಧಾರ ಮಾಡಿದ್ದೆ. ಊರಿಗೆ ಮರಳಿದ ಕೃಷಿಯಲ್ಲಿ ತೊಡಗಿಸಿಕೊಂಡು ಬದುಕು ಕಟ್ಟುಕೊಂಡೆ’ ಎಂದರು.

ಹೈದರಾಬಾದ್‌ನ ಟೆಕಿ ಶ್ರೀಹರ್ಷ, ‘ವ್ಯವಸಾಯದ ಬಗ್ಗೆ ಏನೇನು ಗೊತ್ತಿರಲಿಲ್ಲ. ಐದಾರು ದೇಶಗಳಲ್ಲಿ ಕೆಲಸ ಮಾಡಿದೆ. ಷೇರು ಮಾರುಕಟ್ಟೆ ಕುಸಿತದ ಬಳಿಕ ಕೃಷಿಗೆ ಮರಳಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.