ADVERTISEMENT

‘ಬದುಕಿಗೆ ವಚನ ಸಾಹಿತ್ಯ ಮಾರ್ಗದರ್ಶಿ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2023, 16:21 IST
Last Updated 1 ಜನವರಿ 2023, 16:21 IST
ಆಲನಹಳ್ಳಿಯ ವಾಸವಿ ಶಾಂತಿಧಾಮದಲ್ಲಿ ಭಾನುವಾರ ನಡೆದ ವಚನ ಸಂಗೀತೋತ್ಸವವನ್ನು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು. ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ, ಎಂ.ಚಂದ್ರಶೇಖರ್, ಎಂ.ಎಸ್.ನಾಗರಾಜ ಗುಪ್ತ, ಬಿ.ವಿ. ಶ್ರೀನಿವಾಸ ಗುಪ್ತ, ಎಚ್.ಎಂ.ಸಂದೀಪ್, ಅಕ್ಕಮಹಾದೇವಿ ಇದ್ದಾರೆ

ಮೈಸೂರು: ‘ವಚನ ಸಾಹಿತ್ಯದಲ್ಲಿ ಶರಣರು ಬದುಕಿಗೆ ಮಾರ್ಗದರ್ಶನವಾಗುವ ಹಲವು ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ. ಅವುಗಳನ್ನು ಪಾಲಿಸಬೇಕು’ ಎಂದು ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಹೆಳವರಹುಂಡಿ ಸಿದ್ದಪ್ಪ ಹೇಳಿದರು.

ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ವಾಸವಿ ಶಾಂತಿಧಾಮ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಆಲನಹಳ್ಳಿಯ ವಾಸವಿ ಶಾಂತಿಧಾಮದಲ್ಲಿ ಭಾನುವಾರ ಆಯೋಜಿಸಿದ್ದ ವಚನ ಸಂಗೀತೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಾಹಿತ್ಯ ಮತ್ತು ಸಂಗೀತದಿಂದ ಮಾನಸಿಕ ನೆಮ್ಮದಿ ಜೊತೆಗೆ ಪರಿಪೂರ್ಣ ವ್ಯಕ್ತಿತ್ವ ರೂಢಿಸಿಕೊಳ್ಳಬಹುದಾಗಿದೆ’ ಎಂದರು.

ADVERTISEMENT

ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಧಾತ್ರಿ ಸಮಾರಾಧನಾ ಸಮಿತಿ ಅಧ್ಯಕ್ಷ ಎಂ.ಎಸ್.ನಾಗರಾಜ ಗುಪ್ತ, ಕನ್ಯಕಾ ಪರಮೇಶ್ವರಿ ಕೋ-ಆಪ್ ಬ್ಯಾಂಕಿನ ಅಧ್ಯಕ್ಷ ಎಚ್.ಎಂ.ಸಂದೀಪ್, ವಾಸವಿ ಶಾಂತಿಧಾಮ ಪಬ್ಲಿಕ್ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಗೌರವ ಕಾರ್ಯದರ್ಶಿ ಬಿ.ವಿ.ಶ್ರೀನಿವಾಸ ಗುಪ್ತ, ಅಕ್ಕಮಹಾದೇವಿ ಮಾತನಾಡಿದರು.

ವಿದುಷಿಯರಾದ ಸವಿತಾ–ಸುಮಂಗಲಾ ಸಹೋದರಿಯರು ವಚನ ಗಾಯನ ನಡೆಸಿಕೊಟ್ಟರು. ಪಕ್ಕವಾದ್ಯದಲ್ಲಿ ಭೀಮಶಂಕರ ಬಿದನೂರು, ಷಣ್ಮುಖ ಸಜ್ಜು ಸಾಥ್ ನೀಡಿದರು.

ಸಂಘಟಕ ಸಿ.ಮೋಹನ್‌ರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.