ಮೈಸೂರು: ಇಲ್ಲಿನ ಕರ್ನಾಟಕ ಶಾಸ್ತ್ರೀಯ ಸಂಗೀತ ಒಕ್ಕೂಟ ಟ್ರಸ್ಟ್‌ನಿಂದ ನಾದಬ್ರಹ್ಮ ಸಂಗೀತ ಸಭಾದಲ್ಲಿ ‘ವಾಸುದೇವಾಚಾರ್ಯ ಸಂಸ್ಮರಣ ಸಂಗೀತ ಉತ್ಸವ’ ಭಾನುವಾರ ನಡೆಯಿತು.
ಟ್ರಸ್ಟಿಗಳಾದ ರಾ.ಸ.ನಂದಕುಮಾರ್, ರೇವತಿ ಕಾಮತ್, ಶ್ರೀಕಾಂತಂ ನಾಗೇಂದ್ರಶಾಸ್ತ್ರಿ ಉದ್ಘಾಟಿಸಿದರು.
ಸಮಾರಂಭದಲ್ಲಿ ವಾಸುದೇವಾಚಾರ್ಯ ಕೃತಿಗಳನ್ನಾಧರಿಸಿದ ಗೋಷ್ಠಿ ಗಾಯನವನ್ನು ಪುಸ್ತಕಂ ರಮಾ ಅವರ ನಿರ್ದೇಶನದಲ್ಲಿ ವಿದ್ವಾಂಸರು, ವಿದುಷಿಯರು ಪ್ರಸ್ತುತ ಪಡಿಸಿದರು.
ಗೋಷ್ಠಿ ಗಾಯನದಲ್ಲಿ ಶ್ರೀಕಾಂತಂ ನಾಗದೀಪ್ತಿ, ಶ್ರೀಕಾಂತಂ ನಾಗಪ್ರಣತಿ, ಅಂಬಿಕಾ ಶಾಸ್ತ್ರಿ, ಎಚ್.ಎಸ್.ಕಾರ್ತೀಕೇಯ ಶರ್ಮ, ಸಿ.ಮಲ್ಲಿಕಾ, ರುಚಿರ ಶರ್ಮ, ರಾಧಾ ಸಭಾಪತಿ, ಎಚ್.ಎನ್.ಕಮಲಾ ಮೂರ್ತಿ, ಎನ್.ಎಸ್.ಜ್ಯೋತ್ಸ್ನಾ, ಅಭಿನವ್ ಶ್ರೀನಿವಾಸ್, ಐಶ್ವರ್ಯ ಸತ್ಯ ಕುಮಾರ್, ಎಲ್.ಸ್ಕಂದ ಗಣೇಶ್, ಸ್ವಾತಿ ಎಲ್.ಸುಹಾಸ್, ಲತಾ ವೆಂಕಟೇಶ್ವರನ್, ಮಾಲವಿಕಾ ಅರುಣ್, ಹರಿಣೀ ಶ್ರೀಧರ್, ವಿಜಯ ರಾಜೀವ್, ಆರ್.ಲಲಿತಾ, ವಸುಧಾ ಪ್ರಹ್ಲಾದ್, ಎಲ್.ಸ್ನೇಹಶ್ರಿ, ರಾಧಿಕಾ ಶಿವರಾಂ, ನೀಲಾ ರಂಗನಾಥನ್, ಸರ್ವಮಂಗಳ ಜಗದೀಶ್, ಸವಿತಾ ವಾಸು, ಎಂ.ಎಸ್.ವೀಣಾ, ಶ್ರೀದೇವಿ ಅಯ್ಯಂಗಾರ್, ಲಕ್ಷ್ಮಿ ಕೃಷ್ಣಮೂರ್ತಿ, ದೀಪ್ತಿ ಶ್ರೀನಾಥ್, ಆರ್.ಎಸ್.ಪ್ರಗಲ್ಭ, ಎನ್.ಎ.ಶ್ರೀಕಾಂತ್ ಶರ್ಮ ಪಾಲ್ಗೊಂಡಿದ್ದರು.
ಸಂಜನಾ ಚತುರ್ವೇದಿ ವಯೋಲಿನ್, ಅಚ್ಯುತ್ ಎಂ. ಆತ್ರೇಯ ಕೊಳಲು, ರಾಧಿಕಾ ಶಿವರಾಮ್ ವೀಣೆ, ರಘುನಂದನ್ ಭಾರ್ಗವ, ಎಸ್.ಪಿ.ನಾಗೇಂದ್ರಪ್ರಸಾದ್, ಆನೂರು ಸುನಾದ, ಫಣೀಂದ್ರ ಅವರು ಲಯವಾದ್ಯ ಸಹಕಾರ ನೀಡಿದರು.
ಕಾರ್ಯಕ್ರಮಕ್ಕೂ ಮೊದಲು ವಿದ್ವಾನ್ ವಿಜಯಸೂರ್ಯ ತಂಡದವರು ನಾಗಸ್ವರ ಸಂಗೀತ ಕಛೇರಿ ನಡೆಸಿಕೊಟ್ಟರು.
ಟ್ರಸ್ಟ್‌ನ ಸುಮಾ ಸುಧೀಂದ್ರ, ಪುಸ್ತಕಂ ರಮಾ, ಜ್ಯೋತ್ಸ್ನಾ ಶ್ರೀಕಾಂತ್, ಆನೂರು ಅನಂತಕೃಷ್ಣಮೂರ್ತಿ, ಮಧುಕರಂ ಪ್ರಶಾಂತ್ ಅಯ್ಯಂಗಾರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.