ADVERTISEMENT

ವರ್ಚ್ಯುವಲ್ ವೇದಿಕೆಯಲ್ಲಿ ದಸರಾ ವೀಕ್ಷಿಸಿ

ದಸರಾ ಕಾರ್ಯಕ್ರಮಗಳ ನೇರ ಪ್ರಸಾರ: ಮೈಸೂರು ಜಿಲ್ಲಾಡಳಿತದಿಂದ ಮನವಿ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 5:49 IST
Last Updated 17 ಅಕ್ಟೋಬರ್ 2020, 5:49 IST
ರೋಹಿಣಿ ಸಿಂಧೂರಿ
ರೋಹಿಣಿ ಸಿಂಧೂರಿ   

ಮೈಸೂರು: ಕೋವಿಡ್ -19 ಸೋಂಕು ಹರಡುವಿಕೆ ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ, ಈ ಬಾರಿಯ ದಸರಾ ಆಚರಣೆಯನ್ನು ಸರಳ, ಸಾಂಪ್ರದಾಯಿಕ ಹಾಗೂ ವರ್ಚ್ಯುವಲ್ ಆಗಿ ಆಚರಿಸಲಾಗುತ್ತಿದೆ.

ಚಾಮುಂಡಿಬೆಟ್ಟ ಹಾಗೂ ಅರಮನೆ‌ ಆವರಣದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳನ್ನು ವೆಬ್‌ಸೈಟ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ನೇರ ಪ್ರಸಾರ (ಲೈವ್ ಸ್ಟ್ರೀಮಿಂಗ್) ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಅ.17ರ ಶನಿವಾರ ಬೆಳಿಗ್ಗೆ 7.45ರಿಂದ 8.15ರವರೆಗೆ ನಡೆಯುವ ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭ, ಅರಮನೆ ಆವರಣದಲ್ಲಿ ಅ.17ರಿಂದ 24ರವರೆಗೆ ಪ್ರತಿ ನಿತ್ಯ ಸಂಜೆ ನಡೆಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮೈಸೂರು ಜಿಲ್ಲಾಡಳಿತದ‌ ವೆಬ್‌ಸೈಟ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಫೇಸ್‌ಬುಕ್ ಪೇಜ್, ಹಾಗೂ ಯೂಟ್ಯೂಬ್‌ನಲ್ಲಿ ನೇರ ಪ್ರಸಾರಗೊಳಿಸಲಿದ್ದು, ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದಿದ್ದಾರೆ.

ADVERTISEMENT

ದಸರಾ ಮಹೋತ್ಸವದ ಕೊನೆ ದಿನವಾದ ಅ.26ರಂದು ನಡೆಯುವ ಜಂಬೂ ಸವಾರಿ ಕಾರ್ಯಕ್ರಮವನ್ನು ದೂರದರ್ಶನದ ಚಂದನ ವಾಹಿನಿಯಲ್ಲಿ ನೇರ ಪ್ರಸಾರ ಮಾಡಲಾಗುತ್ತಿದ್ದು, ಏಕ ಕಾಲದಲ್ಲಿ ಇತರೆ ಖಾಸಗಿ ವಾಹಿನಿಗಳು ಹಾಗೂ ಸೋಷಿಯಲ್ ಮೀಡಿಯಾದಲ್ಲೂ ನೇರ ಪ್ರಸಾರ ಮಾಡಲಾಗುವುದು.

ದಸರಾ ಕಾರ್ಯಕ್ರಮಗಳು ನಡೆಯುವ ಸಮಯವನ್ನು ವೆಬ್‌ಸೈಟ್ https://mysore.nic.in ನಲ್ಲಿ ಪ್ರಕಟಿಸಲಾಗಿದೆ.

ನೇರ ಪ್ರಸಾರವನ್ನು (live streaming) ವೆಬ್‌ಸೈಟ್ https://mysore.nic.in ಹಾಗೂ ಫೇಸ್‌ಬುಕ್ ಪೇಜ್ https://www.facebook.com/mysorevarthe/ ಹಾಗೂ ಯೂಟ್ಯೂಬ್ ಲಿಂಕ್ https://youtu.be/HhfbR9FMO8E ಮೂಲಕ ವೀಕ್ಷಿಸಬಹುದು.

ಸಾರ್ವಜನಿಕರು ತಮ್ಮ ಮನೆಯಲ್ಲೇ ಕುಳಿತು ವರ್ಚ್ಯುವಲ್ ವೇದಿಕೆ ಮೂಲಕ ದಸರಾದ ಎಲ್ಲ ಕಾರ್ಯಕ್ರಮ ವೀಕ್ಷಿಸಬೇಕು ಎಂದು ಜಿಲ್ಲಾಧಿಕಾರಿ ರೋಹಿಣಿ ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.