ADVERTISEMENT

ಮಾನವ–ಪ್ರಾಣಿ ಸಂಘರ್ಷ ತಡೆಗೆ ಕ್ರಮ: ಸಂಸದ ಯದುವೀರ ಒಡೆಯರ್

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 2:40 IST
Last Updated 1 ಸೆಪ್ಟೆಂಬರ್ 2025, 2:40 IST
ಎಚ್.ಡಿ.ಕೋಟೆ ತಾಲ್ಲೂಕಿನ ಮಾನಿ ಮೂಲೆ ಹಾಡಿಯಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 125ನೇ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆಯಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಆದಿವಾಸಿಗಳು ಭಾಗವಹಿಸಿದ್ದರು
ಎಚ್.ಡಿ.ಕೋಟೆ ತಾಲ್ಲೂಕಿನ ಮಾನಿ ಮೂಲೆ ಹಾಡಿಯಲ್ಲಿ ಆಯೋಜಿಸಲಾಗಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 125ನೇ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆಯಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಆದಿವಾಸಿಗಳು ಭಾಗವಹಿಸಿದ್ದರು   

ಎಚ್.ಡಿ.ಕೋಟೆ: ‘ಕಾಡಿನ ಸುರಕ್ಷೆತೆಯತ್ತ ಹೆಚ್ಚು ಒತ್ತು ನೀಡಲಾಗಿದ್ದು, ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗಟ್ಟಲು ಕ್ರಮ ವಹಿಸಲಾಗುವುದು’ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ತಾಲ್ಲೂಕಿನ ಮಾನಿಮೂಲೆಹಾಡಿಯಲ್ಲಿ ಭಾನುವಾರ ಆಯೋಜಿಸಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ 125ನೇ ಮನ್‌ ಕಿ ಬಾತ್ ಭಾಷಣದ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಿ ಅವರು ಮಾತನಾಡಿದರು.

‘ರಾಜ್ಯದ ಅರಣ್ಯದ ಗಡಿ ಭಾಗಗಳಲ್ಲಿ ಸಾವಿರಾರು ಕಿಲೋ ಮೀಟರ್ ರೈಲ್ವೇ ಬ್ಯಾರಿಕೇಡ್ ಅಳವಡಿಸಲು ಯೋಜನೆ ರೂಪಿಸಲಾಗುತ್ತಿದೆ. ಯೋಜನೆ ರೂಪುಗೊಂಡ ಬಳಿಕ ಅನುಷ್ಠಾನದ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಅಭಿವೃದ್ಧಿ ಕೆಲಸಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗಳಿಗೂ ಸಹ ತಲುಪುತ್ತಿವೆ. ಅದಕ್ಕೆ ನಿರ್ದೇಶನ ಎಂಬಂತೆ ಇಂದು ನಡೆದ ಕಾರ್ಯಕ್ರಮವೇ ಸಾಕ್ಷಿಯಾಗಿದ್ದು, ಅದರಂತೆ ಸಾಕಾರಗೊಂಡಿದೆ ಎಂದರು.

ಆದಿವಾಸಿಗಳ ಅಹವಾಲು ಸ್ವೀಕರಿಸಿ, ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಮಾತನಾಡುತ್ತೇನೆ ಎಂದು ಭರವಸೆ ನೀಡಿದರು.

ಮೈಸೂರು ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕಂಬ್ರಳ್ಳಿ ಸುಬ್ಬಣ್ಣ ಮಾತನಾಡಿ, ‘ತಾಲ್ಲೂಕಿನ ಮಾನಿಮೂಲೆ ಹಾಡಿಯಲ್ಲಿ ಕಾರ್ಯಕ್ರಮ ಆಯೋಜಿಸಲು ನಮಗೆ ಹಲವು ಸಮಸ್ಯೆಗಳು ಎದುರಾದವು. ಆ ಸಮಸ್ಯೆಗಳಿಗೆ ಪರಿಹಾರ‌ ಕಂಡುಕೊಂಡು ಕಾರ್ಯಕ್ರಮವನ್ನು ಹಾಡಿಯಲ್ಲಿ ಆಯೋಜನೆ ಮಾಡಿದ್ದೇವೆ. ಜೊತೆಗೆ ಇಲ್ಲಿನ ಸಮಸ್ಯೆಗಳನ್ನು ಗುರುತಿಸಿ ಸಂಸದರಿಗೆ ಮಾಹಿತಿ ನೀಡಲಾಗಿದ್ದು, ಕೇಂದ್ರ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಾಗುವುದು’ ಎಂದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಬ್ರಹ್ಮಣ್ಯಸ್ವಾಮಿ, ಮಾಜಿ ಶಾಸಕ ಬಾಲರಾಜು, ಎನ್.ವಿ.ಫಣೀಶ್, ತಾಲ್ಲೂಕು ಅಧ್ಯಕ್ಷ ಶಂಭೇಗೌಡ, ಗುರುಸ್ವಾಮಿ, ಮುಖಂಡರಾದ ಮಹೇಶ್, ಕಿರಣ್, ಬಾಲಕೃಷ್ಣ, ಪರೀಕ್ಷಿತರಾಜೇ ಅರಸ್, ಸಿ.ಕೆ.ಗಿರೀಶ್, ಮೊತ್ತ‌ ಬಸವರಾಜು, ರಾಜು ಬಿಡುಗಲು, ಗುರುಸ್ವಾಮಿ, ಯೋಗೇಶ್‌ಕುಮಾರ್, ಶಿವರಾಜಪ್ಪ, ಗಣಪತಿ, ಟಿ.ವೆಂಕಟೇಶ್, ಶಿವರುದ್ರಪ್ಪ, ವಿಜಯಕುಮಾರ್, ಸುಬ್ರಹ್ಮಣ್ಯ, ಪೃಥ್ವಿ, ಲಕ್ಷ್ಮಣ್, ಬಾಲರಾಜು, ವಿವೇಕಾನಂದ, ವೆಂಕಟೇಶ್, ಸೋಮಶೇಖರ್, ಅನಿಲ್, ಪುಟ್ಟಣ್ಣ, ಮಂಜುನಾಥ್, ವೆಂಕಟಸ್ವಾಮಿ, ಶಿವರಾಜು, ನಟರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.