ADVERTISEMENT

ಮಹಿಳಾ ಸಬಲೀಕರಣದಿಂದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 4:58 IST
Last Updated 31 ಜನವರಿ 2026, 4:58 IST
ಪಿರಿಯಾಪಟ್ಟಣದಲ್ಲಿ ಶುಕ್ರವಾರ ಭೀಮ್ ಆರ್ಮಿ ಏಕತಾ ಮಿಷನ್ ತಾಲ್ಲೂಕು ಸಮಿತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣವನ್ನು ನಿತಿನ್ ವೆಂಕಟೇಶ್ ಉದ್ಘಾಟಿಸಿದರು. ಚೇತನ್, ಗಿರೀಶ್, ಮತಿನ್ ಕುಮಾರ್ ಮತಿನ್ ಕುಮಾರ್, ಲೋಕೇಶ್ ಹಾಜರಿದ್ದರು
ಪಿರಿಯಾಪಟ್ಟಣದಲ್ಲಿ ಶುಕ್ರವಾರ ಭೀಮ್ ಆರ್ಮಿ ಏಕತಾ ಮಿಷನ್ ತಾಲ್ಲೂಕು ಸಮಿತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣವನ್ನು ನಿತಿನ್ ವೆಂಕಟೇಶ್ ಉದ್ಘಾಟಿಸಿದರು. ಚೇತನ್, ಗಿರೀಶ್, ಮತಿನ್ ಕುಮಾರ್ ಮತಿನ್ ಕುಮಾರ್, ಲೋಕೇಶ್ ಹಾಜರಿದ್ದರು   

ಪಿರಿಯಾಪಟ್ಟಣ: ಮಹಿಳಾ ಸಬಲೀಕರಣವಾದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ಚಿತ್ರನಟ ಚೇತನ್ ತಿಳಿಸಿದರು.

ಪಟ್ಟಣದ ಅರಸು ಭವನದಲ್ಲಿ ಭೀಮ್ ಆರ್ಮಿ ಏಕತಾ ಮಿಷನ್ ತಾಲ್ಲೂಕು ಸಮಿತಿಯಿಂದ ಶುಕ್ರವಾರ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಒಂದು ರಾಷ್ಟ್ರದ ಪ್ರಗತಿಯನ್ನು ತಿಳಿದುಕೊಳ್ಳಬೇಕಾದರೆ ನಾವು ದೇಶದ ಮಹಿಳೆಯರ ಪ್ರಗತಿಯನ್ನು ತಿಳಿದುಕೊಳ್ಳಬೇಕು. ಕೊರೊನಾ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯರು ತಮ್ಮ ಜೀವದ ಹಂಗು ತೊರೆದು ಜನಸಾಮಾನ್ಯರ ಪ್ರಾಣ ಉಳಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಇಂದು ಅವರನ್ನು ಸನ್ಮಾನಮಾಡುತ್ತಿರುವುದು ಶ್ಲಾಘನೀಯ ಕಾರ್ಯ’ ಎಂದು ಹೇಳಿದರು

ADVERTISEMENT

ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್ ಮಾತನಾಡಿ, ‘ಸಂಘಟನೆಗಳು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು, ಸಂಘಟನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಸೌಲಭ್ಯ ಸಿಗುವಂತೆ ಮಾಡಬೇಕು, ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಉದ್ದೇಶದಿಂದ ಅಂಬೇಡ್ಕರ್ ನಮಗೆ ಉತ್ತಮ ಸಂವಿಧಾನ ನೀಡಿದ್ದು, ಅವರ ಆಶಯದಂತೆ ಎಲ್ಲರೂ ಉತ್ತಮ ಜೀವನವನ್ನು ನಡೆಸಬೇಕು’ ಎಂದು ತಿಳಿಸಿದರು.

ಭೀಮ್ ಆರ್ಮಿ ಕರ್ನಾಟಕ ಏಕತಾ ಮಿಷನ್ ರಾಜ್ಯಾಧ್ಯಕ್ಷ ಮತಿನ್ ಕುಮಾರ್ ಮಾತನಾಡಿ, ಸಮಸಮಾಜದ ನಿರ್ಮಾಣ ಅಂಬೇಡ್ಕರ್ ಅವರ ಗುರಿಯಾಗಿದ್ದು, ಹಲವು ದೇಶಗಳಲ್ಲಿ ಪ್ರವಾಸ ಮಾಡಿ ಅಲ್ಲಿನ ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿ ನಮಗೆ ಉತ್ತಮ ಸಂವಿಧಾನವನ್ನು ನೀಡಿದ್ದಾರೆ. ಅವರ ಆಶಯದಂತೆ ಎಲ್ಲರೂ ಬದುಕಬೇಕು’ ಎಂದರು.

ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಭೀಮ್ ಆರ್ಮಿ ದಕ್ಷಿಣ ಕರ್ನಾಟಕ ಅಧ್ಯಕ್ಷ ಗಿರೀಶ್ ಕೊಣಸೂರು, ರಾಜ್ಯ ಕಾರ್ಯದರ್ಶಿ ಪ್ರದೀಪ್, ಉಪಾಧ್ಯಕ್ಷ ಜಯಕುಮಾರ್ ಹಾದಿಗೆ, ಗ್ರಾಮ ಪಂಚಾಯಿತಿ ಸದಸ್ಯ ಗಗನ್, ಮಂಜುನಾಥ್, ವಕೀಲ ಸುಧೀಶ್, ಮುಖಂಡರಾದ ಧನರಾಜ್, ರಾಜೇಶ್ ಮೇಲೂರು, ಆಯಿತನಹಳ್ಳಿ ಮಂಜು, ಕಾಂತರಾಜು, ಕುಶಾಲಪ್ಪ, ಸೋಮಶೇಖರ್, ಮಾರುತಿ ಕುದುರೆ, ನವೀನ್, ಮಹದೇವ, ಪುನೀತ್, ಪ್ರಕಾಶ್, ಚಲುವರಾಜು, ಕೆ.ಬಿ. ರಾಜು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.