ADVERTISEMENT

ಪರಿಸರ ದಿನಾಚರಣೆ: ಶ್ರಮದಾನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2023, 14:06 IST
Last Updated 5 ಜೂನ್ 2023, 14:06 IST
ಹುಣಸೂರು ತಾಲ್ಲೂಕಿನ ತರಿಕಲ್ಲಿನ ಸಾವಿರ ಕಂಬಗಳ ದೇವಸ್ಥಾನದ ಬಳಿ ನಗರದ ಟ್ಯಾಲೆಂಟ್ ಶಾಲೆಯ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನದ ಅಂಗವಾಗಿ ಶ್ರಮದಾನ ಮಾಡಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಿದರು
ಹುಣಸೂರು ತಾಲ್ಲೂಕಿನ ತರಿಕಲ್ಲಿನ ಸಾವಿರ ಕಂಬಗಳ ದೇವಸ್ಥಾನದ ಬಳಿ ನಗರದ ಟ್ಯಾಲೆಂಟ್ ಶಾಲೆಯ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನದ ಅಂಗವಾಗಿ ಶ್ರಮದಾನ ಮಾಡಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸಿದರು   

ಹುಣಸೂರು: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ತಾಲ್ಲೂಕಿನ ತರಿಕಲ್ಲಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಾವಿರ ಕಂಬಗಳ ಈಶ್ವರ ದೇವಸ್ಥಾನದ ಸುತ್ತಲು ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆ ವಿದ್ಯಾರ್ಥಿಗಳು ಶ್ರಮದಾನ ಮಾಡಿ ಸಸಿ ನೆಡುವ ಮೂಲಕ ಪರಿಸರ ದಿನ ಆಚರಿಸಿದರು.

ವಿದ್ಯಾರ್ಥಿಗಳು ವಿಶಿಷ್ಟವಾಗಿ ಪರಿಸರ ದಿನಾಚರಣೆ ನಡೆಸಿದ್ದು, ಸುತ್ತಲಿನ ದೇವಸ್ಥಾನದ ಪರಿಸರ ಸ್ವಚ್ಛಗೊಳಿಸಿದರು. ಈ ಸಾಲಿನ ವಿಶ್ವ ಪರಿಸರ ಘೋಷ ವಾಕ್ಯ ಪ್ಲಾಸ್ಟಿಕ್ ರಹಿತ ಪರಿಸರ ನಿರ್ಮಾಣವನ್ನು ಮಾಡುವ ಬಗ್ಗೆ ಸ್ಥಳೀಯರಲ್ಲಿ ವಿದ್ಯಾರ್ಥಿಗಳು ಜಾಗೃತಿಗೊಳಿಸಿ ಸ್ಥಳೀಯರಿಂದ ಸಸಿ ನಡೆಸುವಲ್ಲಿ ತೊಡಗಿದ್ದರು.

ಶಾಲಾ ಶಿಕ್ಷಕರಾದ ಜಗದೀಶ್, ಶಶಿಕಲಾ, ಸುಧಾಕರ್, ಅರ್ಚನಾ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.