ADVERTISEMENT

‘ಉತ್ತಮ ಆಡಳಿತ ದಿನ’ವೆಂದು ಘೋಷಿಸಲಿ

ನಾಲ್ವಡಿ ಜಯಂತಿ ಅರ್ಥಪೂರ್ಣವಾಗಲಿ: ಸರ್ಕಾರಕ್ಕೆ ಯದುವೀರ್‌ ಮನವಿ

​ಪ್ರಜಾವಾಣಿ ವಾರ್ತೆ
Published 5 ಜೂನ್ 2020, 11:09 IST
Last Updated 5 ಜೂನ್ 2020, 11:09 IST
ಅನ್ವೇಷನಾ ಟ್ರಸ್ಟ್‌ ವತಿಯಿಂದ ಪೊಲೀಸ್‌ ಅಧಿಕಾರಿಗಳಾದ (ಎಡದಿಂದ) ಎಂ.ಎಸ್‌.ಪೂರ್ಣಚಂದ್ರ ತೇಜಸ್ವಿ, ಕೆ.ಸಿ.ದಿವ್ಯಶ್ರೀ, ಡಾ.ಎನ್‌.ಪ್ರಕಾಶ್‌ ಗೌಡ, ಶಿವರಾಜು, ಎಂ.ಶಿವಶಂಕರ್‌ ಮತ್ತು ಎನ್‌.ಸಂದೇಶ್‌ ಕುಮಾರ್‌ ಅವರನ್ನು ಗೌರವಿಸಲಾಯಿತು. ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಡಾ.ಎಂ.ಜಿ.ಆರ್‌.ಅರಸ್, ಡಿ.ಸತೀಶ್‌ ಚೌಹಾಣ್‌ ಗುರೂಜಿ, ಶಿವಕುಮಾರ್‌ ಮತ್ತಿತರರು ಇದ್ದಾರೆ

ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಜಯಂತಿ ದಿನವನ್ನು ‘ಉತ್ತಮ ಆಡಳಿತ ದಿನ’ವನ್ನಾಗಿ ಆಚರಿಸಲು ಸರ್ಕಾರ ಕ್ರಮವಹಿಸಬೇಕು ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮನವಿ ಮಾಡಿದರು.

ಅನ್ವೇಷನಾ ಸೇವಾ ಟ್ರಸ್ಟ್‌ ವತಿಯಿಂದ ಗುರುವಾರ ಆಯೋಜಿಸಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಸರ್‌.ಎಂ.ವಿಶ್ವೇಶ್ವರಯ್ಯ ಅವರ ಜಯಂತಿ ದಿನ ನಾವು ದೇಶದಲ್ಲಿ ಎಂಜಿನಿಯರುಗಳ ದಿನ ಆಚರಿಸುತ್ತೇವೆ. ಅದೇ ರೀತಿ ನಾಲ್ವಡಿ ಅವರ ಜಯಂತಿ ಸಮಯದಲ್ಲಿ ‘ಉತ್ತಮ ಆಡಳಿತ ದಿನ’ ಆಚರಿಸಬೇಕು’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಮಾತನಾಡಿ, ‘ನಾಲ್ವಡಿ ಜಯಂತಿ ದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಬೇಕು ಎಂಬ ಸಲಹೆಯನ್ನು ಯದುವೀರ ಅವರು ಮುಂದಿಟ್ಟಿದ್ದಾರೆ. ಆ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತದೆ. ಆದರೆ ಮೈಸೂರು ವಿ.ವಿ ವತಿಯಿಂದ ಮುಂದಿನ ವರ್ಷದಿಂದ ನಾಲ್ವಡಿ ಜಯಂತಿಯನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಗುವುದು’ ಎಂದು ಪ್ರಕಟಿಸಿದರು.

ಅನ್ವೇಷಣಾ ಸೇವಾ ಟ್ರಸ್ಟ್‌ ಅಧ್ಯಕ್ಷ ಡಾ.ಎಂ.ಜಿ.ಆರ್‌.ಅರಸ್, ವೈಜ್ಞಾನಿಕ ವಾಸ್ತು ತಜ್ಞ ಡಿ.ಸತೀಶ್‌ ಚೌಹಾಣ್‌ ಗುರೂಜಿ, ಮಹಾಲಕ್ಷ್ಮಿ ಸ್ವೀಟ್ಸ್‌ ಮಾಲೀಕ ಶಿವಕುಮಾರ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.