ADVERTISEMENT

ಆರ್ಥಿಕ ನಷ್ಟ: ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2020, 3:39 IST
Last Updated 25 ಆಗಸ್ಟ್ 2020, 3:39 IST

ಮೈಸೂರು: ನಗರದ ಒಂಟಿಕೊಪ್ಪಲಿನಲ್ಲಿ ಝೆರಾಕ್ಸ್‌ ಅಂಗಡಿ ನಡೆಸುತ್ತಿದ್ದ ಯುವ ವ್ಯಾಪಾರಿಯೊಬ್ಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಿನೇಶ್ (26) ಆತ್ಮಹತ್ಯೆ ಮಾಡಿಕೊಂಡ ಯುವಕ.

ಅಂಗಡಿ ಮಾಡಲಿಕ್ಕಾಗಿ ಈತ ಸಾಲ ಮಾಡಿಕೊಂಡಿದ್ದ ಎಂಬುದು ತಿಳಿದು ಬಂದಿದೆ ಎಂದು ವಿ.ವಿ.ಪುರಂ ಪೊಲೀಸರು ತಿಳಿಸಿದ್ದಾರೆ.

ಸರ ಕಸಿದು ಪರಾರಿ

ADVERTISEMENT

ಕಿಡಿಗೇಡಿಗಳ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿ, ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದೆ.

ಖಾಸಗಿ ಕಂಪನಿಯ ನೌಕರ, ಎನ್.ಆರ್.ಮೊಹಲ್ಲಾ ನಿವಾಸಿ ಪುನೀತ್ (26) ತನ್ನ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದಾಗ, ಶಿವಾಜಿ ರಸ್ತೆಯಲ್ಲಿ ನಾಲ್ವರ ಗುಂಪೊಂದು ಅಡ್ಡಗಟ್ಟಿ ಈ ಕೃತ್ಯ ನಡೆಸಿದೆ ಎಂಬ ದೂರು ದಾಖಲಾಗಿದೆ ಎಂದು ಎನ್.ಆರ್.ಪೊಲೀಸರು ಮಾಹಿತಿ ನೀಡಿದ್ದಾರೆ.

ದಟ್ಟಗಳ್ಳಿಯ ಸೋಮನಾಥ ಬಡಾವಣೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವೃದ್ಧೆಯ ಸರವನ್ನು ಬೈಕ್‌ನಲ್ಲಿ ಬಂದ ಕಳ್ಳ ಕಿತ್ತುಕೊಂಡು ಪರಾರಿಯಾಗಿದ್ದಾನೆ.

ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಾಲ್ವ್‌ಗೆ ಬಿದ್ದು ಗಾಯ

ಸೋಮವಾರ ರಾತ್ರಿ ನಗರದ ರಾಜ್‌ಕುಮಾರ್‌ ರಸ್ತೆ ಮೂಲಕ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ, ರಸ್ತೆ ಪಕ್ಕದಲ್ಲಿದ್ದ ಬೃಹತ್ ಪೈಪ್‌ಲೈನ್‌ನ ವಾಲ್ವ್‌ ಗುಂಡಿಗೆ ಬಿದ್ದ ಕೆಎಸ್‌ಆರ್‌ಟಿಸಿಯ ನಿವೃತ್ತ ಚಾಲಕ ಎಂ.ವಿ.ದೇವರಾಜು (59) ಗಾಯಗೊಂಡಿದ್ದಾರೆ. ಬೈಕ್ ಜಖಂಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.