ADVERTISEMENT

ಅಕ್ರಮ ಮರಳು ಸಾಗಾಣಿಕೆ: ವಾಹನ ಜಪ್ತಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2013, 10:08 IST
Last Updated 4 ಜೂನ್ 2013, 10:08 IST
ಅಕ್ರಮ ಮರಳು ಸಾಗಾಣಿಕೆ: ವಾಹನ ಜಪ್ತಿ
ಅಕ್ರಮ ಮರಳು ಸಾಗಾಣಿಕೆ: ವಾಹನ ಜಪ್ತಿ   

ದೇವದುರ್ಗ: ತಾಲ್ಲೂಕಿನ ಚಿಂಚೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬುಂಕಲದೊಡ್ಡಿ ಮತ್ತು ಇತರೆಡೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಮತ್ತು ಟಿಪ್ಪರ್ ವಾಹನಗಳನ್ನು ಶನಿವಾರ ರಾತ್ರಿ ಜಪ್ತಿ ಮಾಡಲಾಗಿದೆ ಎಂದು ತಹಸೀಲ್ದಾರ್ ತುಕರಾಮ ಕಲ್ಯಾಣಕರ್ ತಿಳಿಸಿದ್ದಾರೆ.

ಅಕ್ರಮ ಮರಳು ಸಾಗಾಣಿಕೆ ನಡೆಯುತ್ತದೆ ಎಂಬ ಮಾಹಿತಿಯ ಮೇರೆಗೆ  ಸಿಬ್ಬಂದಿ ಜೊತೆ ಬುಂಕಲದೊಡ್ಡಿ ಗ್ರಾಮಕ್ಕೆ ಭೇಟಿ ನೀಡಲಾಗಿತ್ತು. ಕೆಲವು ವಾಹನಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವುದನ್ನು ಪತ್ತೆ ಹಚ್ಚಿ   ಜಪ್ತಿ ಮಾಡಲಾಗಿದೆ ಎಂದರು.

ಕಳೆದ ಕೆಲವು ದಿನಗಳಿಂದ ತಾಲ್ಲೂಕಿನ ಚಿಂಚೋಡಿ, ಬುಂಕಲದೊಡ್ಡಿ, ಬಾಗೂರು ಮತ್ತು ಇತರ ಹತ್ತಾರು ಕಡೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಾಣಿಕೆ ಪ್ರಕ್ರಿಯೆ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮೌನ ವಹಿಸಿದ್ದರು. ಕಳೆದ ಕೆಲವು ದಿನಗಳ ಹಿಂದೆ ಜಿಲ್ಲಾಧಿಕಾರಿ ಎಂ. ಸಾವಿತ್ರಿ ಅವರು ಜೋಳದಹೆಡ್ಗಿ ಗ್ರಾಮಕ್ಕೆ ದಿಢೀರನೆ ಭೇಟಿ ನೀಡಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ಮೌಲ್ಯದ ಮರಳನ್ನು ಜಪ್ತಿ ಮಾಡಿದ್ದರು.

ನಂತರ ಲೋಕೋಪಯೋಗಿ ಇಲಾಖೆ  ನಿರ್ಲಕ್ಷ್ಯದಿಂದ ನೂರಾರು ವಾಹನಗಳ ಮೂಲಕ  ಪಕ್ಕದ ಜಿಲ್ಲೆಗಳಿಗೆ ಮತ್ತು ಹೊರ ರಾಜ್ಯಗಳಿಗೂ ಮರಳು ಸಾಗಾಣಿಕೆ ಆಗುತ್ತಿತ್ತು ಎನ್ನಲಾಗಿದೆ.

ದಂಡ: ಹತ್ತು ಟ್ರ್ಯಾಕ್ಟರ್‌ಗೆ ತಲಾ ನಾಲ್ಕು ಸಾವಿರ ರೂಪಾಯಿಯ ದಂಡ ಮತ್ತು ನಾಲ್ಕು ಟಿಪ್ಪರ್‌ಗಳಿಗೆ ದಂಡ ಹಾಕುವ ಜೊತೆಗೆ ಸಂಬಂಧಿಸಿದ ವಾಹನಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.