ADVERTISEMENT

ಎಚ್‌ಕೆಇಎಸ್‌ ಸಂಸ್ಥೆ ಕಾರ್ಯದರ್ಶಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 7:01 IST
Last Updated 18 ಮಾರ್ಚ್ 2014, 7:01 IST

ರಾಯಚೂರು: ಇಲ್ಲಿನ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಸ್‌ಎಲ್‌ಎನ್‌ ತಾಂತ್ರಿಕ  ಮಹಾವಿದ್ಯಾಲಯದಲ್ಲಿ ಈಚೆಗೆ ಸಂಸ್ಥೆಯ ಕಾರ್ಯದರ್ಶಿ ಡಾ.ಶರದ್‌ ಮಹಾದೇವಪ್ಪ ರಾಂಪುರೆ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯ ಗಂಗಾಧರ ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ಡಾ.ಶರದ್ ಮಹಾದೇವಪ್ಪ ರಾಂಪುರೆ ಅವರ ಸೇವೆ ಗುರುತಿಸಿ ಗುಲ್ಬರ್ಗ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಂಸ್ಥೆಯ  ಜಂಟಿ ಕಾರ್ಯದರ್ಶಿ ಗಿರಿಜಾಶಂಕರ, ಸದಸ್ಯ ಸಂಜುಪಾಟೀಲ, ಮಲ್ಲಿಕಾರ್ಜುನ ದೋತರಬಂಡಿ ಪ್ರಾಚಾರ್ಯ ಡಾ.ಎಸ್ ಬಿ.ಚೆಟ್ಟಿ, ಶಿಕ್ಷಕರ ಬಳದ ಅಧ್ಯಕ್ಷ ಡಾ.ಎಸ್‌.ಜಿ ಮಲಶೆಟ್ಟಿ,ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಜಯ ಕುಮಾರ ಉಪ್ಪಿನ್, ಪ್ರೊ.ವಿಠಲ ಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.