ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ನಿಲ್ಲದ ನಕಲು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:50 IST
Last Updated 4 ಏಪ್ರಿಲ್ 2013, 6:50 IST
ಹಟ್ಟಿಯ ಸಂತ ಅನ್ನಮ್ಮ ಶಾಲೆಯಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರವನ್ನು ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಮುಚ್ಚಲಾಗಿತ್ತು
ಹಟ್ಟಿಯ ಸಂತ ಅನ್ನಮ್ಮ ಶಾಲೆಯಲ್ಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರವನ್ನು ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ಮುಚ್ಚಲಾಗಿತ್ತು   

ಹಟ್ಟಿ ಚಿನ್ನದ ಗಣಿ:  ಸ್ಥಳೀಯ ಪರೀಕ್ಷಾ ಕೇಂದ್ರಗಳಿಗೆ ಸ್ಥಿರ ಹಾಗೂ ಸಂಚಾರಿ ಜಾಗೃತ ದಳಗಳು ಭೇಟಿ ನೀಡುತ್ತಿದ್ದರೂ ಯಾವುದೆ ಅಂಜಿಕೆ ಇಲ್ಲದೇ      ನಕಲಿನಲ್ಲಿ ತೊಡಗಿರುವುದು ಕಂಡು ಬಂದಿತು.

ಬುಧವಾರ ಇಲ್ಲಿಯ ಸಂತ ಅನ್ನಮ್ಮ ಶಾಲೆಯಲ್ಲಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದ ಮುಖ್ಯ ದ್ವಾರವನ್ನು ಮುಚ್ಚಲಾಗಿತ್ತು. ಹೊರಗಿನಿಂದ ಬಿಗಿ ಬಂದೋಬಸ್ತ್ ಕಂಡು ಬಂದಿತು. ಆದರೆ ಕೇಂದ್ರದೊಳಗೆ ಯಾರ ಭಯವಿಲ್ಲದೇ ವಿದ್ಯಾರ್ಥಿಗಳು  ನಕಲಿನಲ್ಲಿ ತೊಡಗಿದ್ದು ಕಂಡುಬಂದಿತು. ಪರೀಕ್ಷಾ ಕೇಂದ್ರದೊಳಗೆ ಯಾರು ಪ್ರವೇಶ ಮಾಡದಂತೆ ನಿಯಮವಿದ್ದರೂ ಡಾ. ಇ.ಎ. ಸೀಮಂಡ್ಸ್ ಶಾಲೆ ಪರೀಕ್ಷಾ ಕೇಂದ್ರದ  ಕಾಂಪೌಂಡ್ ಹಾರಿ ತಮ್ಮ ಗೆಳೆಯರಿಗೆ, ಸಂಬಂಧಿಕರಿಗೆ ನಕಲು ಮಾಡಲು ಚೀಟಿ ಪೂರೈಸುತ್ತಿರುವುದು ಕಂಡುಬಂದಿದೆ. 

ಹಟ್ಟಿ ಕ್ಯಾಂಪಿನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೊನೆಯ ಅರ್ಧ ಗಂಟೆ ಇರುವಾಗ ನಕಲು ಮಾಡಲು ಅವಕಾಶ ನೀಡಲಾಯಿತು ಎಂದು ಕೇಳಿಬಂದಿತು. ವಿಜ್ಞಾನ ವಿಷಯಕ್ಕೆ ಈ ಮೂರು ಕೇಂದ್ರಗಳಲ್ಲಿ ಒಟ್ಟು 1051 ವಿದ್ಯಾರ್ಥಿಗಳು ನೋಂದಣಿ ಮಾಡಿಸಿ ಕೊಂಡಿದ್ದಾರೆ.  ಸಂತ ಅನ್ನಮ್ಮ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ 432,  ಸೀಮಂಡ್ಸ್ ಪರೀಕ್ಷಾ ಕೇಂದ್ರದಲ್ಲಿ 268 ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ 300 ವಿದ್ಯಾರ್ಥಿಗಳು ವಿಜ್ಞಾನ ವಿಷಯಕ್ಕೆ ಪರೀಕ್ಷೆ ಬರೆದರು ಎಂದು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.