ADVERTISEMENT

ಕೋಮು ಹಿಂಸಾಚಾರ ಮಸೂದೆ ವಿರೋಧಿಸಿ ಬೈಕ್ ರ‌್ಯಾಲಿ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 10:35 IST
Last Updated 12 ಅಕ್ಟೋಬರ್ 2011, 10:35 IST

ರಾಯಚೂರು: ಕೋಮು ಹಿಂಸಾಚಾರ ಮಸೂದೆ ವಿರೋಧಿಸಿ ಮಂಗಳವಾರ ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇಲ್ಲಿನ ಕರ್ನಾಟಕ ಸಂಘದಿಂದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ಬೈಕ್ ರ‌್ಯಾಲಿ ನಡೆಸಿದರು.

ರ‌್ಯಾಲಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಾಹಿತಿ ತಂತ್ರಜ್ಞಾನ ಘಟಕದ ಅಧ್ಯಕ್ಷ ಗಿರೀಶ ಕನಕವೀಡು ಅವರು, ಕಾಂಗ್ರೆಸ್ ಪಕ್ಷವು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಹಿಂದೂಗಳಿಗೆ ಅನ್ಯಾಯವಾಗುವಂಥ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷ ದೇವಿಸಿಂಗ್ ಠಾಕೂರ್, ನಗರ ಘಟಕದ ಅಧ್ಯಕ್ಷ ಶೇಖರರೆಡ್ಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಂಡೇಶ ವಲ್ಕಂದಿನ್ನಿ, ಜಿಲ್ಲಾ ಕಾರ್ಯದರ್ಶಿಗಳಾದ ರಾಜಕುಮಾರ, ಜಿ. ತಿಮ್ಮಾರೆಡ್ಡಿ,

ಯುವ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಡಗೋಳ ರಾಮಚಂದ್ರ, ಉಪಾಧ್ಯಕ್ಷರಾದ ಲಕ್ಷ್ಮಣ ಯಾದವ್, ಎಲ್.ಜಿ ಶಿವಕುಮಾರ, ವಿ.ಗೋವಿಂದ್, ನರೇಂದ್ರ ಹೊಕ್ರಾಣಿ, ಜಿಲ್ಲಾ ಕೋಶಾಧ್ಯಕ್ಷ ರಘವೀರಸಿಂಗ್, ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಭಾವಿ, ಶಂಕರರೆಡ್ಡಿ, ನಾಗರಾಜ ಶೆಟ್ಟಿ, ಪಂಪನಗೌಡ, ಯಂಕೋಬ, ಪರಶುರಾಮ, ಚಂದ್ರಕಾಂತ ಮನೋಳ್ಳಿ, ಅರಕೇರಿ ತಾಯಪ್ಪ,ಜಂಗ್ಲೆಪ್ಪ, ರವಿಶಂಕರ, ಕೆ.ತಾಯಪ್ಪ, ಗುರುಸ್ವಾಮಿ, ಸಿದ್ಧಲಿಂಗಯ್ಯ ಸ್ವಾಮಿ, ಮಲ್ಲಿಕಾರ್ಜುನ, ವಿಜಯಕುಮಾರ, ಹರೀಶ, ಸೀತರಾಮ ಹಾಗೂ ಮತ್ತಿತರರು ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.