ADVERTISEMENT

ಖಾತ್ರಿ ಪಿಂಚಣಿ ಯೋಜನೆ ಜಾರಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 9:30 IST
Last Updated 10 ಜೂನ್ 2013, 9:30 IST

ಲಿಂಗಸುಗೂರ: ಕಳೆದ ಮಾರ್ಚ್ ತಿಂಗಳಲ್ಲಿ ಪ್ರಧಾನಮಂತ್ರಿ ಮತ್ತು ಕೇಂದ್ರ ಕಾರ್ಮಿಕ ಸಚಿವರ ಸಹಯೋಗದಲ್ಲಿ ಜರುಗಿದ ಭಾರತೀಯ ಕಾರ್ಮಿಕ ಸಮಾವೇಶದ (ಇಂಡಿಯನ್ ಲೇಬರ್ ಕಾನ್ಫ್‌ರೆನ್ಸ್ )ತೀರ್ಮಾನಗಳನ್ನು ಜಾರಿಗೆ ತರಬೇಕು. ಆ ಸಂದರ್ಭದಲ್ಲಿ ವಿರೋಧ ವ್ಯಕ್ತವಾದ ಷೇರು ಮಾರುಕಟ್ಟೆ ಪಿಂಚಣಿ ಪದ್ಧತಿ ಕೈಬಿಟ್ಟು ಖಾತ್ರಿ ಪಿಂಚಣಿ ಯೋಜನೆ ಜಾರಿಗೆ ತರುವಂತೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೇಕ್ಷಾಖಾದ್ರಿ ಆಗ್ರಹಪಡಿಸಿದರು.

ಭಾನುವಾರ ಬಿಸಿಯೂಟ ನೌಕರರ 3ನೇ ತಾಲ್ಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ನೇಮಕಾತಿ ಮಾಡುವುದರಿಂದ ಹಿಡಿದು ನಿವೃತ್ತಿ ಹೊಂದುವವರಗಿನ ಎ್ಲ್ಲಲ ಹಂತಗಳಲ್ಲಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಅಡುಗೆದಾರರನ್ನು ಕಾರ್ಮಿಕರೆಂದು ಪರಿಗಣಿಸಿ ಕನಿಷ್ಠ 10ಸಾವಿರ ರೂಪಾಯಿ ವೇತನ ನೀಡುವುದು, ಕಾಯಂಗೊಳಿಸುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.

ಸಮ್ಮೇಳನದ ಅಧ್ಯಕ್ಷತೆಯನ್ನು ಶಂಕರಮ್ಮ ಗುರುಗುಂಟ ವಹಿಸಿದ್ದರು. ಜಿಲ್ಲಾಧ್ಯಕ್ಷೆ ರೇಣುಕಮ್ಮ ಸಿಂಧನೂರ, ಎಂ.ಸಿ. ಲಿಂಗಪ್ಪ, ಜಿ.ಎಸ್. ವೆಂಕೋಬ, ಎಂ.ಡಿ. ಹನೀಫ್, ಬಾಬು ಕಡ್ಡೋಣಿ, ರಮೇಶ, ಶರಣಮ್ಮ ಮತ್ತಿತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.