ADVERTISEMENT

ಜ. 2ರಿಂದ ನೀನಾಸಮ್ ತಿರುಗಾಟ ನಾಟಕಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 8:35 IST
Last Updated 22 ಡಿಸೆಂಬರ್ 2012, 8:35 IST

ರಾಯಚೂರು: `ನೀನಾಸಮ್ ತಿರುಗಾಟ 2012-13ರ' ತಿರುಗಾಟದ ಎರಡು ನಾಟಕಗಳು ಜನವರಿ 2 ಮತ್ತು 3ರಂದು ಸಂಜೆ 7ಕ್ಕೆ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಉಚಿತವಾಗಿ ಪ್ರದರ್ಶನಗೊಳ್ಳಲಿವೆ.

ಜನವರಿ 2ರಂದು `ವಿಗಡ ವಿಕ್ರಮರಾಯ' ಸಂಸ ಅವರ ನಾಟಕ ಆಧರಿಸಿದ್ದು, ಮಂಜು ಕೊಡಗು ಅವರ ಪ್ರಯೋಗ, ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ನಾಟಕ ಪ್ರದರ್ಶನಗೊಳ್ಳಲಿದೆ. 3ರಂದು  `ಮುಕ್ಕಾಂ ಪೋಸ್ಟ್ ಬೊಂಬಿಲ್‌ವಾಡಿ' ಎಂಬ ಪರೇಶ್ ಮೊಕಾಶಿ ಅವರ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಅನುವಾದ ಮತ್ತು ನಿರ್ದೇಶನ  ಕೆ.ಆರ್ ಓಂಕಾರ್ ಅವರದ್ದಾಗಿದೆ.

ಜಿಲ್ಲೆಯ ಎಲ್ಲ ರಂಗಾಸಕ್ತರು, ರಂಗಭೂಮಿ ಕಲಾವಿದರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು, ಕಲಾವಿದರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಮಾಜ ಕಾರ್ಯ ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಂದು ನಾಟಕ ವೀಕ್ಷಿಸಬೇಕು ಎಂದು ರಂಗಾಸಕ್ತರ ಬಳಗದ ಸಂಚಾಲಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

371 ಮಸೂದೆ ಮಂಡನೆಗೆ ವಕೀಲರ ಸಂಘ ಹರ್ಷ
ರಾಯಚೂರು: ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ  ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಸಂವಿಧಾನದ 371ನೇ ಕಲಂ ತಿದ್ದುಪಡಿ         ಮಸೂದೆಗೆ ಅಂಗೀಕಾರ ದೊರಕಿದ್ದಕ್ಕೆ ರಾಯಚೂರು ವಕೀಲರ ಸಂಘ ಹರ್ಷ ವ್ಯಕ್ತಪಡಿಸಿದೆ. ಮಸೂದೆ ಅಂಗೀಕಾರಗೊಂಡಿದ್ದಕ್ಕೆ ಸಿಹಿ ಹಂಚಿ ಸಂಭ್ರಮಿಸಿದರು.

ಈ ಭಾಗದ ಹಿರಿಯ ನಾಯಕರಾದ ವೈಜನಾಥ ಪಾಟೀಲ, ಹಿರಿಯ ವಕೀಲ ಬಿ ಬಸವರಾಜ ವಕೀಲ ಹಾಗೂ ಈ ಭಾಗದ ಎಲ್ಲ ಜನಪರ ಹೋರಾಟಗಾರರು, ಎಲ್ಲ ರಾಜಕೀಯ ಪಕ್ಷಗಳು, ಕೇಂದ್ರ ಸರ್ಕಾರ ಮತ್ತು ಸಂಸತ್ತಿನ ಎಲ್ಲ ಸದಸ್ಯರಿಗೆ ವಕೀಲರ ಸಂಘವು ಅಭಿನಂದನೆ ಸಲ್ಲಿಸುತ್ತದೆ. ಮಸೂದೆ ಆದಷ್ಟು ಬೇಗ ಜಾರಿಗೊಳ್ಳಬೇಕು ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.