ADVERTISEMENT

ತುಂಗಭದ್ರಾ ನದಿ ಪಾತ್ರ: ಸಂಸದ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2013, 10:37 IST
Last Updated 3 ಆಗಸ್ಟ್ 2013, 10:37 IST

ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿತ್ತಿರುವ ಕಾರಣ ಹಾನಿಗೊಳಗಾದ ತಾಲ್ಲೂಕಿನ ನದಿಪಾತ್ರದ ಗ್ರಾಮಗಳಿಗೆ ಸಂಸದ ಕೆ.ಶಿವರಾಮಗೌಡ ಗುರುವಾರ ಭೇಟಿ ನೀಡಿ ಪರಿಶೀಲಿಸಿದರು.

ತಾಲ್ಲೂಕಿನ ಸಿಂಗಾಪುರ ಹಾಗೂ ಮುಕ್ಕುಂದಾ ಗ್ರಾಮಗಳಿಗೆ ತೆರಳಿದ ಅವರು,  ನದಿ ನೀರಿನಲ್ಲಿ ಮುಳುಗಡೆಯಾದ ರೈತರ ಪಂಪ್‌ಸೆಟ್, ಬತ್ತದ ಗದ್ದೆಗಳನ್ನು ವೀಕ್ಷಿಸಿದರು.

ನಂತರ ಸುದ್ದಿಗಾರರೊಂದಿಗೆಮಾತನಾಡಿ, `ನದಿಪಾತ್ರದಲ್ಲಿ ಬತ್ತದ ಗದ್ದೆಗಳು ಮುಳುಗಡೆಯಾಗಿವೆ. ಅಪಾಯ ಮಟ್ಟ ಮೀರಿ ನೀರು ಬರುವ ಮೊದಲು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲು ತಾಲ್ಲೂಕು ಆಡಳಿತಕ್ಕೆ ಸೂಚಿಸಲಾಗಿದೆ. 36/3 ವಿತರಣಾ ಕಾಲುವೆ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಸಮಸ್ಯೆ ಪರಿಹಾರಕ್ಕೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ಹೇಳಿದರು.

ತಹಶೀಲ್ದಾರ ಬಿ.ಟಿ.ಕುಮಾರಸ್ವಾಮಿ, ಉಪತಹಶೀಲ್ದಾರ ಕನಕಪ್ಪ, ಬಿಜೆಪಿ ತಾಲ್ಲೂಕು ಅಧ್ಯಕ್ಷ ದೇವೇಂದ್ರಪ್ಪ ಯಾಪಲಪರ್ವಿ, ಕಲ್ಲೂರು ಬಸಪ್ಪ, ನಗರ ಘಟಕ ಅಧ್ಯಕ್ಷ ಮಧ್ವರಾಜ್ ಆಚಾರ್, ಶಿವಬಸನಗೌಡ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.