ADVERTISEMENT

`ಧರ್ಮದಿಂದ ರಾಜಕೀಯ ದೂರವಿಡಿ'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 9:00 IST
Last Updated 27 ಡಿಸೆಂಬರ್ 2012, 9:00 IST

ಹಟ್ಟಿ ಚಿನ್ನದ ಗಣಿ: ಧಾರ್ಮಿಕ ಚಟುವಟಿಕೆಯಲ್ಲಿ ರಾಜಕೀಯ ಬೆರಸುವುದು ಬೇಡ, ನಮ್ಮಲ್ಲಿರುವ ಪರಸ್ಪರ ವೈಮನಸ್ಸು ದೂರ ಮಾಡಿ ಸಮಾಜದ ಏಳ್ಗೆಗಾಗಿ ದುಡಿಯೋಣ ಎಂದು ರಾಯಚೂರು ಜಿಲ್ಲಾ ಮುಸ್ಲಿಂ ಕೌನ್ಸಿಲ್ ಅಧ್ಯಕ್ಷ ಬಶೀರುದ್ದೀನ್ ಸಾಬ್ ಹೇಳಿದರು.

ಮಂಗಳವಾರ ಸ್ಥಳೀಯ ಅಂಜುಮನ್ ಬೈತುಲ್ ಮಾಲ್ ಸಮಿತಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಲವು ಜನ ಜಿಹಾದ್ ಹೆಸರಲ್ಲಿ  ಜನಾಂಗದ ಹೆಸರು ಕೆಡಸುತ್ತುದ್ದಿದ್ದಾರೆ. ದುಷ್ಕರ್ಮಗಳಿಂದ ದೂರವಿರುವುದೇ ಇಂದಿನ ದಿನಗಳಲ್ಲಿ ಜಿಹಾದ್ ಆಗಿದೆ. ಪರಸ್ಪರಲ್ಲಿ ದ್ವೇಷ ದೂರು ಮಾಡುವ, ಸಹಕರಿಸುವ ಕೆಲಸ ಆಗಬೇಕಾಗಿದೆ ಎಂದರು.

ಶಂಕುಸ್ಥಾಪನೆ ನೆರವೇರಿಸಿದ ಗುಲ್ಬರ್ಗದ ಮಹ್ಮದ್ ಅಫ್ಜಲುದ್ದೀನ್ ಜುನೆದಿ ಮಾತನಾಡಿ, ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು, ಮೇಲು ಕೀಳು ಎಂಬ ಭಾವನೆಯನ್ನು ತೊಡೆದು ಹಾಕುವ ಕಾರ್ಯ ಆಗಬೇಕೆಂದು ಹೇಳಿದರು. ಈ ಸಮಾರಂಭದ ಅಧ್ಯಕ್ಷತೆ ಅಂಜುಮನ್ ಸಮಿತಿಯ ಅಧ್ಯಕ್ಷ ಖಾಜಿ ಅಬ್ದುರ್ ರಹೀಮ್ ವಹಿಸಿಕೊಂಡಿದ್ದರು. ಖುತ್ಬುದ್ದೀನ್ ಸಾಬ್, ಸಿರವಾರ ಜಿಲ್ಲಾ ಪಂ. ಸದಸ್ಯ ಅಸ್ಲಂ ಪಾಶಾ, ಲಿಂಗಸಗೂರಿನ ಲಾಲ್ ಅಹ್ಮದ್ ಸಾಬ್, ರಫೀಕ್ ಅಹ್ಮದ್, ಅಬಿದ್ ಅಲಿ ಎಂಜಿನಿಯರ್, ಕೊಪ್ಪಳ ಉಪ ಸಹಸೀಲ್ದಾರ್ ಲಿಯಾಖತ್ ಅಲಿ, ಖಾದರ್ ಮೋಹಿನುದ್ದೀನ್, ಫಾರುಖುದ್ದೀನ್, ಮಕ್ದುಂ ಶಾ ಹಾಗೂ ಇತರರು ಇದ್ದರು. ಹಟ್ಟಿ ಗಣಿ ಸೇವೆಯಿಂದ ನಿವೃತ್ತಿ ಹೊಂದಿದ ಕಾರ್ಮಿಕರಿಗೆ ಹಾಗೂ ಹಜ್ ಯಾತ್ರೆ ಮುಗಿಸಿದವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಲಾಜುದ್ದೀನ್ ನಿರೂಪಿಸಿದರು. ಶಂಶುದ್ದೀನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.