ADVERTISEMENT

ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕಟ್ಟೆಚ್ಚರ

ಲಿಂಗಸುಗೂರು: 278 ಮತಗಟ್ಟೆ, 2,37,853 ಮತದಾರರು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 13:54 IST
Last Updated 4 ಏಪ್ರಿಲ್ 2018, 13:54 IST
ರೇಣುಕಾ ಪ್ರಸಾದ
ರೇಣುಕಾ ಪ್ರಸಾದ   

ಲಿಂಗಸುಗೂರು: ‘ಮಾರ್ಚ್‌ 27ರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು ಲಿಂಗಸುಗೂರು ವಿಧಾನಸಭೆ (ಮೀಸಲು) ಕ್ಷೇತ್ರದಾದ್ಯಂತ ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ’ ಎಂದು ಚುನಾವಣಾಧಿಕಾರಿ ರೇಣುಕಾ ಪ್ರಸಾದ ಹೇಳಿದರು.ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ಷೇತ್ರದಲ್ಲಿ 273 ಮತಗಟ್ಟೆ, 5 ಹೆಚ್ಚುವರಿ ಮತಗಟ್ಟೆ ಒಟ್ಟು 278 ಮತಗಟ್ಟೆಗಳನ್ನು ಗುರುತಿಸಲಾಗಿದೆ. ಈ ಪೈಕಿ 94 ಸೂಕ್ಷ್ಮ, 49 ಅತಿಸೂಕ್ಷ್ಮ, 135 ಮತಗಟ್ಟೆಗಳನ್ನು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. 1,18,813 ಪುರುಷ, 1,19,034 ಮಹಿಳೆ ಸೇರಿದಂತೆ ಒಟ್ಟು 2,37,853 ಮತದಾರರು ಇದ್ದಾರೆ’ ಎಂದು ವಿವರಿಸಿದರು.

‘ಲಿಂಗಸುಗೂರು ವಿಧಾನಸಭಾ ಕ್ಷೇತದ ಚುನಾವಣಾ ಪ್ರಕ್ರಿಯೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ. ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಕ್ರಿಯೆ ಲಿಂಗಸುಗೂರಿನ ಮಿನಿ ವಿಧಾನಸೌಧದಲ್ಲಿ ನಡೆಸಲಾಗುತ್ತದೆ. ಏಪ್ರಿಲ್‌ 12ರಂದು ನಡೆಯುವ ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ ಬಳಕೆ ಮಾಡಲಾಗುತ್ತದೆ. ಮತದಾನ ದಿನದಂದು ಅಂದಾಜು 13,146 ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ’ ಎಂದರು. ‘ವಿಧಾನಸಭಾ ಕ್ಷೆತ್ರದ ಗಡಿ ಪ್ರದೇಶದ ಬೆಳ್ಳಿಹಾಳ, ರೋಡಲಬಂಡ (ಯುಕೆಪಿ), ಛತ್ತರ ಗ್ರಾಮಗಳ ಬಳಿ ವಿಶೇಷ ಚೆಕ್‌ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಗಡಿಭಾಗದಲ್ಲಿ ಸಂಚರಿಸುವ ವಾಹನಗಳ ತಪಾಸಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮತದಾನ ದಿನದಂದು ಮತಗಟ್ಟೆಗೆ ಸಿಬ್ಬಂದಿ ಕಳುಹಿಸಲು 48 ಸಾರಿಗೆ ಬಸ್‌, 13 ಕ್ರೂಸರ್‌ ಇತರೆ 61 ವಾಹನಗಳ ಬಳಕೆಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಚುನಾವಣಾ ನೀತಿ ಸಂಹಿತೆ ನಿರ್ವಹಣೆಗೆ ವಿವಿಧ ಅಧಿಕಾರಿಗಳನ್ನು ಒಳಗೊಂಡ ತಂಡಗಳನ್ನು ರಚಿಸಲಾಗಿದೆ. ಈ ಎಲ್ಲಾ ತಂಡಗಳ ಜೊತೆಗೆ ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿ ದೂರು, ಮಾಹಿತಿ ನೀಡಲು ಕಂಟ್ರೋಲ್‌ ರೂಮ್‌ ತೆರೆಯಲಾಗಿದೆ. ಕಂಟ್ರೋಲ್‌ ರೂಮ್‌ಗೆ 08537–257247, 08537–258248, ಮೊಬೈಲ್‌ ಸಂಖ್ಯೆ 6361459805ಗೆ ಸಂಪರ್ಕಿಸಬಹುದು’ ಎಂದು ತಿಳಿಸಿದರು.ಚುನಾವಣೆಗೆ ಸಂಬಂಧಿಸಿ ಸೇರಿದಂತೆ ಸಾರ್ವಜನಿಕರು ಕೂಡ ಹಬ್ಬ ಹರಿದಿನಗಳ ಕುರಿತು ಚುನಾವಣೆ ಪ್ರಕ್ರಿಯೆ ಮುಗಿವವರೆಗೆ ಪರವಾನಗಿ ಪಡೆದುಕೊಳ್ಳುವುದು ಕಡ್ಡಾಯ. ಕಾರ್ಯಕ್ರಮ, ರ್‍್ಯಾಲಿ ಹೆಸರಿನಲ್ಲಿ ಉಪಹಾರ, ಊಟದ ವ್ಯವಸ್ಥೆ ಮಾಡಿಸುವಂತಿಲ್ಲ. ಕುಡಿಯಲು ನೀರು ಮತ್ತು ಮಜ್ಜಿಗೆ ಮಾತ್ರ ನೀಡಬಹುದಾಗಿದೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಚೇತನಾ ಪಾಟೀಲ, ಪ್ರೊಬೇಷನರಿ ತಹಶೀಲ್ದಾರ್‌ಗಳಾದ ರೇಣುಕಾ ಎಸ್‌, ತಿಮ್ಮಣ್ಣ ಉಜ್ಜಯಿನಿ ಉಪಸ್ಥಿತರಿದ್ದರು.

**

ಚುನಾವಣೆ ಶಾಂತಿಯುತವಾಗಿ ನಡೆಯಲು ರಾಜಕೀಯ ಪಕ್ಷಗಳ ಮುಖಂಡರು, ಸಂಘ ಸಂಸ್ಥೆ ಪ್ರತಿನಿಧಿಗಳು ಚುನಾವಣಾ ನೀತಿ ಸಂಹಿತೆ ಅನುಷ್ಠಾನಕ್ಕೆ ಬದ್ಧರಾಗಿರುವುದು ಕಡ್ಡಾಯ – ರೇಣುಕಾ ಪ್ರಸಾದ, ಚುನಾವಣಾಧಿಕಾರಿ, ಲಿಂಗಸುಗೂರು.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.