ADVERTISEMENT

ಮಾನ್ವಿ: ಈಶ್ವರ ದೇವಸ್ಥಾನದ ದಶಮಾನೋತ್ಸವ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 10:04 IST
Last Updated 12 ಡಿಸೆಂಬರ್ 2012, 10:04 IST

ಮಾನ್ವಿ: ಪಟ್ಟಣದ ಈಶ್ವರ ದೇವಸ್ಥಾನದ ದಶಮಾನೋತ್ಸವ ಸಮಾರಂಭವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಂಗವಾಗಿ ಸಂಜೆ ದೇವಸ್ಥಾನದಲ್ಲಿ ಸಹಸ್ರ ದೀಪೋತ್ಸವ, ನಗೆಹಬ್ಬ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ, ಕಲ್ಮಠದ ಪೀಠಾಧ್ಯಕ್ಷ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ದೇವರ ಸ್ಮರಣೆಗಾಗಿ ಹಚ್ಚಲಾಗುವ ದೀಪದ ಬೆಳಕು  ಪ್ರತಿಯೊಬ್ಬರ ಬಾಳಿನಲ್ಲಿಯೂ ಸಂತಸ, ನೆಮ್ಮದಿ ನೀಡಲಿ ಎಂದು ಹಾರೈಸಿದರು.

ಎ.ಬಿ.ಉಪ್ಪಳಮಠ ವಕೀಲ ಮಾತನಾಡಿ, ಸಮಾಜದಲ್ಲಿನ ತಾರತಮ್ಯ, ಮೇಲು-ಕೀಳು ಎನ್ನುವ ಮೌಢ್ಯ ಭಾವನೆಗಳು  ತೊಲಗಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಹೇಳಿದರು.ಅಚಲೇರಿ ಬಸವರಾಜೇಂದ್ರ ಸ್ವಾಮೀಜಿ, ತುಂಗಭದ್ರಾ ಕಾಡಾ ಅಧ್ಯಕ್ಷ ಬಸನಗೌಡ ಬ್ಯಾಗವಾಟ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವಿ.ಸ್ವಾಮಿ, ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಶೇಖರಪ್ಪ ಪಾಟೀಲ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಾ ವೆಂಕಟಪ್ಪ ನಾಯಕ, ಸರ್ಕಾರಿ ನೌಕರರ ಸಂಘದ ಗುಲ್ಬರ್ಗ ವಿಭಾಗೀಯ ಉಪಾಧ್ಯಕ್ಷ ಎ.ಬಾಲಸ್ವಾಮಿ ಕೊಡ್ಲಿ, ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತ ಹಿರಿಯ ವೈದ್ಯ ಡಾ.ಎಂ.ಎಲ್.ಪಾಟೀಲ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಪಿ.ಪರಮೇಶ, ನಿವೃತ್ತ ನೌಕರರಾದ ವಿರುಪಣ್ಣ, ಬಸವರಾಜ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ಹಿರಿಯ ವೈದ್ಯ ಡಾ.ಬಸವಪ್ರಭು ಪಾಟೀಲ್ ಬೆಟ್ಟದೂರು, ತಾಲ್ಲೂಕು ಬೇಡ ಜಂಗಮ ಸಮಾಜದ ಅಧ್ಯಕ್ಷ ಶ್ರೀಧರಸ್ವಾಮಿ, ಬಸನಗೌಡ ದದ್ದಲ, ನಯೋಪ್ರಾ ಅಧ್ಯಕ್ಷ ಉಮೇಶ ಸಜ್ಜನ್, ಪುರಸಭೆ ಉಪಾಧ್ಯಕ್ಷ ಸಬ್ಜಲಿಸಾಬ್, ಈಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಬಸವರಾಜಪ್ಪ ಚಿಮ್ಲಾಪುರ, ಪುರಸಭೆ ಸದಸ್ಯರಾದ ರೌಡೂರು ಮಹಾಂತೇಶ ಸ್ವಾಮಿ, ಮಹಿಬೂಬ, ಮುಖಂಡರಾದ ಈರಪ್ಪಗೌಡ ಚೀಕಲಪರ್ವಿ, ಆರ್.ಯಂಕೋಬಯ್ಯ ಶೆಟ್ಟಿ, ಅಮರೇಗೌಡ ನಕ್ಕುಂದಿ, ಮಹಾಲಿಂಗಪ್ಪಗೌಡ ಮತ್ತಿತರರು ವೇದಿಕೆಯಲ್ಲಿದ್ದರು.

ಶುಕಮುನಿ ನಿರೂಪಿಸಿದರು. ಅಯ್ಯಪ್ಪ ಪ್ರಾರ್ಥನೆ ಗೀತೆ ಹಾಡಿದರು. ಜಗದೀಶ ಓತೂರು ಸ್ವಾಗತಿಸಿದರು. ಶ್ರೀಕಾಂತಸ್ವಾಮಿ ವಂದಿಸಿದರು.

ನಗೆಹಬ್ಬ: ಕಾರ್ಯಕ್ರಮದ ನಂತರ ಖ್ಯಾತ ಹಾಸ್ಯ ಕಲಾವಿದರಾದ ರಿಚರ್ಡ್ ಲೂಯಿಸ್, ಮೈಸೂರು ಆನಂದ, ಕಿರ್ಲೋಸ್ಕರ್ ಸತ್ಯ, ಅಸಾದುಲ್ಲಾ ಅವರಿಗೆ ನಗೆ ಹಬ್ಬ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.