ಲಿಂಗಸುಗೂರ: ಪ್ರವಾದಿ ಹಜರತ್ ಮೊಹ್ಮದ್ ಪೈಗಂಬರ್ ರಸೂಲಿಲ್ಲಾ ಹಿತಾಲಾರ ಜನ್ಮ ದಿನದ ಅಂಗವಾಗಿ ಆಚರಿಸಲ್ಪಡುವ ಈದ್ ಮಿಲಾದ್ ಹಬ್ಬವನ್ನು ಬುಧವಾರ ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಆಚರಿಸಿದರು. ಇಸ್ಲಾ ಮಿಕ್ ಸ್ಟುಡೆಂಟ್ ಆರ್ಗನೈ ಜೇಷನ್ (ಐಎಸ್‌ಒ) ರೋಗಿಗಳಿಗೆ ಹಾಲು- ಹಣ್ಣು, ಬ್ರೆಡ್ ವಿತರಿಸಿತು. ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ರೋಗಿಗಳ ಯೋಗಕ್ಷೇಮ ವಿಚಾರಿ ಸುವ ಜೊತೆಗೆ ಹಾಲು- ಹಣ್ಣು ವಿತರಿಸಿದ ಸಮಾಜ ಬಾಂಧವರು ಅಲ್ಹಾನು ತಮಗೆಲ್ಲ ಒಳ್ಳೆಯದನ್ನು ಮಾಡಲಿ ಎಂದು ಶುಭ ಹಾರೈಸಿದರು. ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶಿವಬಸಪ್ಪ ಹೆಸರೂರ, ಡಾ. ದಿಗಂಬರ ಸಾರಥ್ಯದಲ್ಲಿ ಮುಖಂಡ ರಾದ ಲಾಲಅಹ್ಮದಸಾಬ, ಖುದ್ದುಸ್ ಮಿಯಾ, ರಾಜಾಹುಸೇನ್ ಪೇಸ್ ಇಮಾಮ್, ಅಬ್ದುಲ್ ವಾಹಿದ್, ಡಾ. ಜಾವೀದ, ಖಾಲೀದ್, ಜಹಿ ರುದ್ದೀನ್, ಎಂ.ಡಿ. ಖಾಜಾಹುಸೇನ್, ಸಫಿ, ಖಾಜಾ, ನಬೀಬ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.