ADVERTISEMENT

ವಿವಿಧೆಡೆ ವಿವೇಕಾನಂದ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 8:55 IST
Last Updated 13 ಜನವರಿ 2012, 8:55 IST

ರಾಯಚೂರು: ನಗರದ ವಿವಿಧ ಸಂಘ ಸಂಸ್ಥೆಗಳಿಂದ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವ ಅದ್ಧೂರಿಯಾಗಿ ಗುರುವಾರ ಆಚರಿಸಲಾಯಿತು.

ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ  ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ಜೆಸಿಐ ಹಾಗೂ ರಾಷ್ಟ್ರೀಯ ಜನ ಸುರಕ್ಷ ಸಂಘಟನೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಿಂದ  ಮಹಾತ್ಮ ಗಾಂಧಿ ಕ್ರೀಡಾಂಗಣದವರೆಗೆ ಯುವ ಓಟ-2012 ಆಯೋಜಿಸಲಾಗಿತ್ತು. ನಗರದ ವಿವಿಧ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ  ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು  ಪಾಲ್ಗೊಂಡಿದ್ದರು.

ಶಾಸಕ ಸಯ್ಯದ್ ಯಾಸಿನ್ ಸಹಾಯಕ ಆಯುಕ್ತ ಎಂ.ತಿಮ್ಮಪ್ಪ, ಯುವಜನ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ನಾಗಪ್ಪ ರೇವಡಗುಂದಿ, ಪವನಕುಮಾರ ಪಾಟೀಲ್. ಅಶೋಕ ಲೋದ್, ದಂಡಪ್ಪ ಬಿರಾದಾರ್ ಹಾಗೂ ಮತ್ತಿತರರು ಭಾಗವಹಿಸಿದ್ದರು.

ಕ್ರೀಡಾ ಇಲಾಖೆ: ಇಲ್ಲಿನ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಲ್ಲಿ ಸ್ವಾಮಿವಿವೇಕಾನಂದರ ಜಯಂತ್ಯುತ್ಸವ ಆಚರಣೆ ನಡೆಯಿತು.

ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ನಾಗಪ್ಪ ರೇವಡಗುಂದಿ ಅವರು ಮಾಲಾರ್ಪಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಕಿ ತರಬೇತುದಾರ ಮುದ್ದೇಬಿಹಾಳ, ಹನುಮಂತಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬಿಜೆಪಿ ಯುವ ಮೋರ್ಚಾ: ಇಲ್ಲಿನ ಕರ್ನಾಟಕ ಸಂಘದಲ್ಲಿ  ಬಿಜೆಪಿ ಯುವ ಮೋರ್ಚಾದ ಜಿಲ್ಲಾ ಘಟಕದವತಿಯಿಂದ ಸ್ವಾಮಿವಿವೇಕಾನಂದರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಮಾತನಾಡಿ, ಸ್ವಾಮಿವಿವೇಕಾನಂದ ಅವರ ಜೀವನ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಅಚ್ಯುತರೆಡ್ಡಿ, ಬಂಡೇಶ ವಲ್ಕಂದಿನ್ನಿ, ರಮಾನಂದ ಯಾದವ್, ಯುವ ಮೋರ್ಚಾದ ಜಿಲ್ಲಾಧ್ಯಕ್ಷ ದೇವಿಸಿಂಗ್ ಠಾಕೂರ್, ಪ್ರಧಾನ ಕಾರ್ಯದರ್ಶಿ ಕಡಗೋಲ ಆಂಜನೇಯ, ರಾಮಚಂದ್ರ, ಜಿಲ್ಲಾ ಕಾರ್ಯದರ್ಶಿ ರಾಜಾಚಂದ್ರ,  ಮಂಜುನಾಥ ಭಾವಿ, ಸದಸ್ಯರಾದ ರವಿ, ಅಜಯ, ಸಿದ್ಧಲಿಂಗಯ್ಯ, ಎಸ್.ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮಹಾಲಿಂಗ ರಾಂಪುರ, ರಮೇಶ ಗುರುಮಿಠಕಲ್, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷ ಸುಶೀಲಾ ಹಾಗೂ ಮತ್ತಿತರರು ಪಾಲ್ಗೊಂಡಿದ್ದರು.

ಎಸ್‌ವಿಸಿಟಿ ಟ್ರಸ್ಟ್: ನಗರದ ಸ್ವಾಮಿವಿವೇಕಾನಂದ ಚಾರಿಟೇಬಲ್ ಟ್ರಸ್ಟ್‌ನವತಿಯಿಂದ ಸ್ವಾಮಿವಿವೇಕಾನಂದರ ಜಯಂತ್ಯುತ್ಸವ ಆಚರಣೆ ಮಾಡಲಾಯಿತು. ಉದ್ಘಾಟನೆ ನೆರವೇರಿಸಿದ ಟ್ರಸ್ಟ್‌ನ ಅಧ್ಯಕ್ಷ ಎ.ರಮೇಶ ಕುಲಕರ್ಣಿ ಮಾತನಾಡಿ, ಭಾರತ ಸಂಸ್ಕೃತಿಯನ್ನು ಉಳಿಸಿ ಬೆಳಸಲು ಯುವಕರು ಮುಂದಾಗಬೇಕು ಎಂದು ತಿಳಿಸಿದರು.

ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಜೆ.ಎಂ ವೀರೇಶಕುಮಾರ, ಖಜಾಂಚಿ ಸಂಗಪ್ಪ ಗಣೇಕಲ್, ಸದಸ್ಯರಾದ ಆರ್.ಚಂದ್ರಶೇಖರ, ಜೆ.ಸುಭಾಷ್, ಎಸ್.ನಾಗರಾಜ, ಕೃಷ್ಣ, ರಾಜು, ಜೆ.ನರೇಶ, ಈಟೇಗಾರ ಹಾಗೂ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.