ADVERTISEMENT

‘ವೈಲೆಟ್‌ ಇಂಕ್‌’ ಕಿರುಚಿತ್ರ ಬಿಡುಗಡೆ

ಮತದಾರರ ಜಾಗೃತಿಗಾಗಿ ಜಿಲ್ಲಾಡಳಿತದ ಜಾಲತಾಣಕ್ಕೆ ಅಳವಡಿಕೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 9:29 IST
Last Updated 30 ಮಾರ್ಚ್ 2018, 9:29 IST
ರಾಯಚೂರಿನ ಪತ್ರಿಕಾ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ‘ವೈಲೆಟ್‌ ಇಂಕ್‌’ ಕಿರುಚಿತ್ರವನ್ನು ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದರು
ರಾಯಚೂರಿನ ಪತ್ರಿಕಾ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ‘ವೈಲೆಟ್‌ ಇಂಕ್‌’ ಕಿರುಚಿತ್ರವನ್ನು ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದರು

ರಾಯಚೂರು: ಮತದಾನಕ್ಕೆ ಪ್ರೇರೇಪಿಸುವ ಕಥೆ ಹೊಂದಿರುವ ‘ವೈಲೆಟ್‌ ಇಂಕ್‌’ ಕಿರುಚಿತ್ರವನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಅವರು ಪತ್ರಿಕಾ ಭವನದಲ್ಲಿ ಗುರುವಾರ ಬಿಡುಗಡೆ ಮಾಡಿದರು.

ಕಿರುಚಿತ್ರ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ‘ಜಿಲ್ಲಾಡಳಿತದಿಂದ ಯಾವುದೇ ಸೂಚನೆಯಿಲ್ಲದೆ ಸ್ವಯಂ ಪ್ರೇರಣೆಯಿಂದ ಮತದಾನದ ಬಗ್ಗೆ ಕಿರುಚಿತ್ರ ಮಾಡಿರುವುದು ಶ್ಲಾಘನೀಯ. ಪತ್ರಕರ್ತರ ತಂಡವು ಈ ಚಿತ್ರ ಸಿದ್ಧಪಡಿಸಿರುವುದು ಇನ್ನೂ ವಿಶೇಷ. ಈ ಚಿತ್ರವನ್ನು ಜಿಲ್ಲಾಡಳಿತದ ಜಾಲತಾಣಕ್ಕೆ ಅಳವಡಿಸಲಾಗುವುದು’ ಎಂದು ತಿಳಿಸಿದರು.

ಮತದಾನ ಮಾಡಬೇಕು ಎನ್ನುವ ಸಂದೇಶವನ್ನು ಕಿರುಚಿತ್ರದಲ್ಲಿ ಹೇಳಿರುವ ರೀತಿ ಗಮನ ಸೆಳೆಯುವಂತಿದೆ. ಚಹಾ ಮಾರಾಟಗಾರ, ತೃತೀಯ ಲಿಂಗಿಗಳು ಸೇರಿದಂತೆ ಪ್ರತಿಯೊಂದು ಕ್ಷೇತ್ರದ ಉದ್ಯೋಗಿಗಳಿಂದ ‘ನಾನು ಮತ ಹಾಕ್ತೀನಿ’ ಎನ್ನುವ ಸಂದೇಶ ಹೇಳಿಸಿದ್ದಾರೆ. ಅಲ್ಲದೆ, ಚಿತ್ರದ ಸಂಭಾಷಣೆಯಲ್ಲಿ ವಿನೋದವೂ ಇರುವುದರಿಂದ ಜನರು ಮೆಚ್ಚಿಕೊಳ್ಳುತ್ತಾರೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಭಿರಾಂ ಜಿ.ಶಂಕರ ಮಾತನಾಡಿ, ಮತದಾರರ ಜಾಗೃತಿ ಕೆಲಸದಲ್ಲಿ ಪತ್ರಕರ್ತರು ಜಿಲ್ಲಾಡಳಿತದೊಂದಿಗೆ ಸೇರಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಿಶೋರಬಾಬು ಮಾತನಾಡಿ, ‘2013 ರಲ್ಲಿ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ ಶೇ 67ರಷ್ಟು ಮತದಾನವಾಗಿತ್ತು. ಮಾಧ್ಯಮವು ಜನರ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಹೀಗಾಗಿ ಕಿರುಚಿತ್ರ ಸೇರಿದಂತೆ ವಿವಿಧ ಮಾಧ್ಯಮಗಳಿಂದ ಮತದಾರರನ್ನು ಜಾಗೃತಿಗೊಳಿಸಿ, ಈ ಬಾರಿ ಹೆಚ್ಚಿನ ಪ್ರಮಾಣದ ಮತದಾನ ಸಾಧ್ಯವಾಗುವಂತೆ ಮಾಡೋಣ’ ಎಂದು ತಿಳಿಸಿದರು.

ಹಿರಿಯ ಪತ್ರಕರ್ತರಾದ ಅರವಿಂದ ಕುಲಕರ್ಣಿ, ಬಿ.ವೆಂಕಟಸಿಂಗ್‌ ವೇದಿಕೆಯಲ್ಲಿದ್ದರು.

ಕಿರುಚಿತ್ರ ಕಥೆ, ಸಂಕಲನ ಹಾಗೂ ನಿರ್ದೇಶನವನ್ನು ಪತ್ರಕರ್ತ ವಿಜಯ ಜಾಗಟಗಲ್‌ ಮಾಡಿದ್ದಾರೆ. ಪತ್ರಕರ್ತರಾದ ಸಿದ್ದಯ್ಯಸ್ವಾಮಿ ಕುಕನೂರು, ರಾಮಕೃಷ್ಣ ದಾಸರಿ ಹಾಗೂ ಕಲಾವಿದರಾದ ಹನುಮೇಶ ಕರಣಗಿ, ಮಲ್ಲಿಕಾರ್ಜುನ, ವೆಂಕಟೇಶ ನಟನೆ ಮಾಡಿದ್ದಾರೆ. ಸಂತೋಷಕುಮಾರ್‌, ಸತೀಶಕುಮಾರ್‌ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರವು 9 ನಿಮಿಷ 42 ಸೆಕೆಂಡ್‌ ಅವಧಿ ಇದೆ. https://youtu.be/CoeeaYN3YvE ಜಾಲತಾಣದಲ್ಲಿ ಕಿರುಚಿತ್ರ ವೀಕ್ಷಿಸಬಹುದು.

ವಿಜಯ ಜಾಗಟಗಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದಯ್ಯಸ್ವಾಮಿ ಕುಕನೂರು ಸ್ವಾಗತಿಸಿದರು. ವೆಂಕಟೇಶ ಹೂಗಾರ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.