ಮಾನ್ವಿ: ರಾಜಕೀಯದಲ್ಲಿ ವ್ಯಕ್ತಿಗಿಂತ ಪಕ್ಷ ಹಾಗೂ ಪಕ್ಷದ ಸಿದ್ಧಾಂತ ಮುಖ್ಯ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಸಂಘಟಿತರಾಗಿ ಆತ್ಮವಿಶ್ವಾಸದಿಂದ ಶ್ರಮಿಸಬೇಕು ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಗುರುವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಾತ್ಯತೀತ ಜನತಾದಳದ ತಾಲ್ಲೂಕು ಘಟಕದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಾವು ಕಾರ್ಯಕರ್ತರ ಶ್ರಮದಿಂದ 45ಸಾವಿರ ಮತಗಳನ್ನು ಗಳಿಸಲು ಸಾಧ್ಯವಾಯಿತು. ಲೋಕಸಭೆ ಚುನಾವಣೆಯಲ್ಲಿಯೂ ಕೂಡ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರಿಗೆ ಮಾನ್ವಿ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ದೊರಕಿಸಿಕೊಡಲು ಕಾರ್ಯಕರ್ತರು ಸಜ್ಜಾಗಬೇಕು ಎಂದು ಕರೆ ನೀಡಿದರು.
ಪಕ್ಷದ ಹಿರಿಯ ಮುಖಂಡರಾದ ಹರಿನಾರಾಯಣ ವಕೀಲ, ಟಿ. ಮಲ್ಲಿಕಾರ್ಜುನ ಪಾಟೀಲ್ ಬಲ್ಲಟಗಿ, ವಿದ್ಯಾಸಾಗರ ಪಾಟೀಲ್, ಪಂಪಾಪತಿಗೌಡ ಸಾನಬಾಳ, ಜೆ.ಎಚ್.ದೇವರಾಜ, ಬುಡ್ಡಪ್ಪ ನಾಯಕ, ಈರಣ್ಣ ಮರ್ಲಟ್ಟಿ ಪೋತ್ನಾಳ ಪಕ್ಷದ ಸಂಘಟನೆ ಹಾಗೂ ಚುನಾವಣೆ ಸಿದ್ಧತೆ ಕುರಿತು ಮಾತನಾಡಿದರು.
ಪಕ್ಷದ ಮುಖಂಡರಾದ ಎ.ಕೆ.ರಂಗದಾಳ, ಮಲ್ಲಪ್ಪ ಹೂಗಾರ್, ಚೆನ್ನಬಸಯ್ಯ ಸ್ವಾಮಿ, ರಾಜಾ ಮಹೇಂದ್ರ ನಾಯಕ, ಶಕೀಲ್ ಬೇಗ್, ಬಸನಗೌಡ ಉಟಕನೂರು, ಬಿಚ್ಚಾಲಿ ದುರುಗಪ್ಪ ಸಿರವಾರ, ಈಶಪ್ಪ ಹೂಗಾರ ಸಿರವಾರ, ಮಲ್ಲಯ್ಯ ಪೋತ್ನಾಳ, ಅಕ್ಬರ್ ಸಾಬ್ ಕವಿತಾಳ, ಕಾಶೀನಾಥ ಸರೋದೆ, ಶರಣೇಗೌಡ ಹೊಸಮನಿ ಲ್ಲಟಗಿ, ಪ್ರಕಾಶಪ್ಪ ಸಿರವಾರ, ನಾಗಬುಸ್ಸಪ್ಪ ಸಿರವಾರ, ಬಶೀರ ಸಾಬ್, ರಾಜಪ್ಪ ಪೋತ್ನಾಳ, ಹಂಪಯ್ಯ ಸ್ವಾಮಿ ಗಣದಿನ್ನಿ, ಶರಣಗೌಡ ಕೆಳಗೇರಿ, ಶಂಕರಗೌಡ ಕರಡಿಗುಡ್ಡ, ಗೋವಿಂದಪ್ಪ ನಾಯಕ ಬಲ್ಲಟಗಿ, ಮೌಲಾಸಾಬ, ಲಕ್ಷ್ಮಣ ಯಾದವ್, ಇಬ್ರಾಹಿಂ ಖುರೇಷಿ, ಅಬ್ದುಲ್ ರಶೀದ್, ಜುಲ್ಫಿ ಅಳ್ಳಪ್ಪ ನಾಯಕ, ಸುಪ್ರಿಯಾ ಕುಮಾರ, ಬಿ.ಅರ್.ಸುಧಾನಂದ, ಗುರುರಾಜ ಹಿರೇಕೊಟ್ನೇಕಲ್, ಸಿದ್ದಲಿಂಗಪ್ಪ ಬೊಮ್ಮನಾಳ, ಹಂಪನಗೌಡ ನೀರಮಾನ್ವಿ, ವಸಂತ ನಾಯಕ, ಮಾರೆಪ್ಪ ನಾಯಕ ಹರವಿ, ವಾಸು, ಅನ್ವರ್ ಸಾಬ, ಬಾಷ ಸಾಬ ಟೇಲರ್, ಪಂಪಣ್ಣ ದೊರೆ, ಮಹಾದೇವ ನಾಯಕ, ಸಾಬಯ್ಯ ನಾಯಕ ಮತ್ತಿತರರು ಭಾಗವಹಿಸಿದ್ದರು. ಪಿ.ರವಿಕುಮಾರ ವಕೀಲ ನಿರೂಪಿಸಿದರು. ಬಿ.ವಿಶ್ವನಾಥ ಸ್ವಾಗತಿಸಿದರು. ಎಸ್.ವೆಂಕೋಬ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.