ADVERTISEMENT

ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 5:55 IST
Last Updated 17 ಆಗಸ್ಟ್ 2012, 5:55 IST

ಹಟ್ಟಿ ಚಿನ್ನದ ಗಣಿ: ಇಲ್ಲಿಗೆ ಸಮೀಪದ ಗುರುಗುಂಟಾ ಗ್ರಾಮ ಸೇರಿದಂತೆ ಇನ್ನತರ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲು ಜಲನಿರ್ಮಲ ಯೋಜನೆಯಡಿ ಮಂಜೂರು ಮಾಡದ ಒಟ್ಟು 21.19 ಕೋಟಿ ವೆಚ್ಚದ ಕಾಮಗಾರಿಗೆ ಗುರುವಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಲಿಂಗಪ್ಪ ಹೂಗಾರ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಶಾಶ್ವತ ಕುಡಿಯುವ ನೀರಿನ ಬೇಡಿಕೆ ಬಹುದಿನಗಳದಾಗಿತ್ತು. ಈ ಯೋಜನೆ ಗುರುಗುಂಟಾ ಸೇರಿದಂತೆ ಪೈದೊಡ್ಡಿ, ಕೋಠಾ, ಹಟ್ಟಿ ಗ್ರಾಮಗಳು ಒಳಗೊಂಡಿದೆ. ಈ ಯೋಜನೆ ಬರಲು ಶಾಸಕರ ಆಸಕ್ತಿಯೇ ಕಾರಣ ಎಂದು ಈ ಸಂದರ್ಭದಲ್ಲಿ ಶಾಸಕರ ಸೇವೆ ಶ್ಲಾಘಿ ಸಿದರು.

ಈ ಯೋಜನೆಯು ಎರಡು ಪ್ಯಾಕೇಜ್ ಹೊಂದಿದೆ. ಟ್ಯಾಂಕ್ ನಿರ್ಮಿಸಲು 13.19 ಕೋಟಿ ಮತ್ತು ಪೈಪ್ ಲೈನ್ ಅಳವಡಿಸಲು 8 ಕೋಟಿ. ಐದು ಗ್ರಾಮಗಳ ನಡುವೆ ಒಟ್ಟು 19 ಕಿ.ಮೀ. ಪೈಪ ಲೈನ್ ಹಾಕಲಾಗುವುದು. ನಿಗದಿ ಪಡಿಸಿದ ಗಡುವಿನೊಳಗೆ ಕಾಮಗಾರಿ ಮುಗಿಸುವಂತೆ ಗುತ್ತಿಗೇದಾರರಿಗೆ ಸೂಚಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಾ ಸೋಮನಾಥ ನಾಯಕ, ಗುತ್ತಿಗೆದಾರ ಅಮರಗುಂಡಪ್ಪ ಮೇಡಿ, ವಾಸುದೇವ ನಾಯಕ, ಗೋವಿಂದ ನಾಯಕ, ದಿಡ್ಡಿಮನಿ, ಅಮರೇಶ ತಾತಾ, ತಿರುಮಲ, ಕೋಠಾ ಗ್ರಾಮದ ಶಿವಣ್ಣ ನಾಯಕ, ಜಲ ನಿರ್ಮಲ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶಿವಕುಮಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.