ADVERTISEMENT

ಸಿಇಟಿ ಮೂಲಕ ವೃತ್ತಿ ಶಿಕ್ಷಣ ಪ್ರವೇಶಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 10:03 IST
Last Updated 20 ಡಿಸೆಂಬರ್ 2013, 10:03 IST

ಲಿಂಗಸುಗೂರು: ರಾಜ್ಯದಲ್ಲಿ ವೃತ್ತಿ ಶಿಕ್ಷಣ ಎಂಜಿನಿಯರಿಂಗ್‌, ವೈದ್ಯಕೀಯ ಪ್ರವೇಶ­ಗಳನ್ನು ಸಿಇಟಿ ಪ್ರವೇಶ ಪರೀಕ್ಷೆ ಮೂಲಕ ನಡೆಯಬೇಕು. ಅಲ್ಲದೆ, ಸರ್ಕಾರ ಕಾಯ್ದೆ ಅನ್ವಯ ಶುಲ್ಕ ನಿಗದಿಗೆ ಮುಂದಾ­ಗುವಂತೆ ಆಗ್ರಹಿಸಿ ಗುರುವಾರ ಎಸ್‌ಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌. ರಂಗನಾಥ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಬರೆದ ಮನವಿಯನ್ನು ತಹಶೀಲ್ದಾರ್‌ರ ಮೂಲಕ ಸಲ್ಲಿಸಲಾಯಿತು.

ಸರ್ಕಾರ ತೆಗೆದುಕೊಂಡಿರುವ ಸಧ್ಯದ ನಿರ್ಣಯ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಹಿತ ಕಾಪಾ­ಡುವ ನಿರ್ಣಯವಾಗಿ ಹೊರಹೊಮ್ಮಿದೆ. ಸಿಇಟಿ ಪರೀಕ್ಷೆ ಮೂಲಕ ಪ್ರವೇಶ ದೊರಕಬೇಕು. ಶೇ 75:25ರ ಅನುಪಾತದಲ್ಲಿ ಸೀಟುಗಳ ಹಂಚಿಕೆ ಆಗಬೇಕು. ಸರ್ಕಾರಿ ಕಾಲೇಜುಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು. ಹೊಸ ಎಂಜಿನಿಯರಿಂಗ್‌ ಮತ್ತು ವೈದ್ಯಕೀಯ ಕಾಲೇಜು ಮಂಜೂರು ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಗಮನ ಸೆಳೆದಿದ್ದಾರೆ.

ಎಸ್‌ಎಫ್‌ಐ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಶಾಂತ. ವಿದ್ಯಾರ್ಥಿ ಮುಖಂಡರಾದ ರಮೇಶ, ಉದಯಕುಮಾರ, ಶಿವಕುಮಾರ, ರಾಜು, ಆರೂಫ್‌ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT