ADVERTISEMENT

ಸೇತುವೆ ಜಲಾವೃತ: ಸಂಚಾರಕ್ಕೆ ತೊಂದರೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2017, 10:10 IST
Last Updated 1 ಅಕ್ಟೋಬರ್ 2017, 10:10 IST

ಸಿಂಧನೂರು: ತಾಲ್ಲೂಕಿನ ಸೋಮಲಾಪೂರ ಹಾಗೂ ವೆಂಕಟೇಶ್ವರಕ್ಯಾಂಪ್ ಸಂಪರ್ಕ ಕಲ್ಪಿಸುವ ಸೇತುವೆ ಮೇಲೆ ಹಳ್ಳದ ನೀರು ಹರಿಯುತ್ತಿರುವುದರಿಂದ ವಾಹನ ಮತ್ತು ಜನ ಸಂಚಾರ ತೊಂದರೆಯಾಗಿದೆ.

ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಸೋಮಲಾಪೂರ ಹಳ್ಳ ಸಂಪೂರ್ಣ ತುಂಬಿ ಸೇತುವೆ ಮೇಲೆ ನೀರು ಸಾಗುತ್ತಿದೆ. ಇದೇ ಮಾರ್ಗದಿಂದಲೇ ಸುಕ್ಷೇತ್ರ ಅಂಬಾಮಠಕ್ಕೆ ತೆರಳಬೇಕಾಗಿದ್ದು, ನವರಾತ್ರಿ ಪೂಜೆಗೆ ತೆರಳುವವರು ನಿತ್ಯ ಪರದಾಟ ನಡೆಸುತ್ತಿದ್ದಾರೆ.

‘ಸೇತುವೆಯು ಈಗಾಗಲೇ ಅಲ್ಲಲ್ಲಿ ಬಿರುಕು ಬಿಟ್ಟಿದ್ದು, ಕುಸಿದು ಬೀಳುವ ಸಾಧ್ಯತೆಯಿದೆ. ನೂತನ ಸೇತುವೆ ನಿರ್ಮಾಣ ಮಾಡುವುದಾಗಿ ಭರವಸೆ ನೀಡುತ್ತಾ ಬರಲಾಗುತ್ತಿದೆ. ಆದರೆ, 10 ವರ್ಷಗಳು ಕಳೆಯುತ್ತಾ ಬಂದರೂ ಈ ಬಗ್ಗೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಕಾಳಜಿ ವಹಿಸಿಲ್ಲ’ ಎಂದು ಗ್ರಾಮದ ಲಿಂಗಪ್ಪ, ರಾಜಾಸಾಬ ಆರೋಪಿಸಿದರು.

ADVERTISEMENT

‘ಹಳ್ಳ ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿರುವುದರಿಂದ ಯಾವಾಗ ಸೇತುವೆ ಕುಸಿಯುತ್ತದೆಂಬ ಭಯದಿಂದ ಜನಸಾಮಾನ್ಯರು ಸಂಚಾರ ಮಾಡಬೇಕಾಗಿದೆ. ಶಾಸಕ ಹಂಪನಗೌಡ ಬಾದರ್ಲಿ ಅವರು ನೂತನ ಸೇತುವೆ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಮಂಜೂರು ಮಾಡಿಸಿ ಕಾಮಗಾರಿಗೆ ಚಾಲನೆ ನೀಡಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.