ADVERTISEMENT

ಸ್ಪರ್ಧೆ: ಆಂಧ್ರದ ಎತ್ತುಗಳು ಪ್ರಥಮ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 9:40 IST
Last Updated 17 ಜೂನ್ 2011, 9:40 IST
ಸ್ಪರ್ಧೆ: ಆಂಧ್ರದ ಎತ್ತುಗಳು ಪ್ರಥಮ
ಸ್ಪರ್ಧೆ: ಆಂಧ್ರದ ಎತ್ತುಗಳು ಪ್ರಥಮ   

ರಾಯಚೂರು: ಸತತ ಹನ್ನೆರಡು ವರ್ಷಗಳಿಂದ ಕಾರ ಹುಣ್ಣಿಮೆ ಅಂಗವಾಗಿ ಇಲ್ಲಿನ ಮುನ್ನೂರು ಕಾಪು ಸಮಾಜವು ನಡೆಸುತ್ತ ಬಂದಿರುವ ಮುಂಗಾರು ಸಾಂಸ್ಕೃತಿ ರಾಯಚೂರು ಹಬ್ಬದ ಪ್ರಮುಖ ಅಕರ್ಷಣೆಯಾದ `ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆ~ಯ ಎರಡನೆಯ ದಿನವಾದ ಬುಧವಾರ 12 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.

ಮಂಗಳವಾರ ಒಂದುವರೆ ಟನ್ ಭಾರದ ಕಲ್ಲು ಎಳೆಯುವ ಸ್ಪರ್ಧೆಗೆ 11 ಜೋಡಿ ಎತ್ತುಗಳು
ಪಾಲ್ಗೊಂಡಿದ್ದವು. ಬುಧವಾರ ನಡೆದ ಸ್ಪರ್ಧೆಯ ವೀಕ್ಷಣೆಗೆ ಕರ್ನಾಟಕ ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದರು.

ವಿಶೇಷವಾಗಿ ಕಾರ ಹುಣ್ಣಿಮೆ ದಿನವಾಗಿದ್ದರಿಂದ ಕೃಷಿ ಚಟುವಟಿಕೆಗೆ ಸ್ಥಗಿತ. ಹೀಗಾಗಿ ರೈತ ಸಮುದಾಯ ಹೆಚ್ಚಿನ ಆಸಕ್ತಿಯಿಂದ ಈ ಸ್ಪರ್ಧೆ ವೀಕ್ಷಣೆಗೆ ಆಗಮಿಸಿದ್ದರು.

ಪ್ರತಿ ಜೋಡಿ ಎತ್ತುಗಳು ಸ್ಪರ್ಧಾ ಅಂಗಳಕ್ಕೆ ಇಳಿಯುತ್ತಿದ್ದಂತೆಯೇ ಕಿಕ್ಕಿರಿದು ಸೇರಿದ್ದ ಜನತೆ, ಕೇ ಕೇ ಹಾಕಿ ಎತ್ತುಗಳನ್ನು ಹುರುದುಂಬಿಸುತ್ತಿದ್ದುದು ಕಂಡು ಬಂದಿತು. ಎತ್ತುಗಳು ಸ್ಪರ್ಧಾ ಅಂಗಳಕ್ಕೆ ಇಳಿಯುತ್ತಿದ್ದಂತೆಯೇ ಅವುಗಳ ಮಾಲೀಕರು, ತರಬೇತುದಾರರು ಸ್ಪರ್ಧೆಗೆ ಸಜ್ಜುಗೊಳಿಸುತ್ತಿದ್ದರು.

ಛಾಟಿ ಏಟಿಗೆ ಎತ್ತುಗಳು ನಲುಗುತ್ತಿದ್ದವು. ದಷ್ಟಪುಷ್ಟವಾಗಿ ಬೆಳೆಸಿದ ತಮ್ಮ ಎತ್ತುಗಳು ಸ್ಪರ್ಧೆಯಲ್ಲಿ ಗೆಲ್ಲಲೇಬೇಕು ಎಂಬ ಉಮೇದಿ ಮಾಲೀಕರು ಮತ್ತು ತರಬೇತುದಾರರು ಎತ್ತುಗಳನ್ನು ಗೆಲ್ಲಿಸಲು ಶ್ರಮಿಸುತ್ತಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಈ ಸ್ಪರ್ಧೆಯನ್ನು ಸಾರ್ವಜನಿಕರು ಆಸಕ್ತಿಯಿಂದ ವೀಕ್ಷಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.