ADVERTISEMENT

ಹಟ್ಟಿ: ಯೋಗ ಶಿಬಿರ ಆರಂಭ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:20 IST
Last Updated 8 ಅಕ್ಟೋಬರ್ 2011, 10:20 IST

ಹಟ್ಟಿ ಚಿನ್ನದ ಗಣಿ: ಸ್ಥಳೀಯ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಯೋಗ ಶಿಬಿರ ಶುಕ್ರವಾರ ಟ್ರಸ್ಟ್ ಅಧ್ಯಕ್ಷ ಡಾ. ಮಾವಿನಕಟ್ಟಿ ಉದ್ಘಾಟಿಸಿದರು.

ಯೋಗ ಸಾಧಕ ಆನಂದ ಪತ್ತಾರ ಸಿಂಧನೂರ ಶಿಬಿರಾರ್ಥಿಗಳಿಗೆ ಪ್ರಾಣಾಯಾಮ ಮತ್ತು ಯೋಗ ವಿವಿಧ ಆಸನಗಳ ಕುರಿತು ವಿವರಿಸಿದರು.

ದೈಹಿಕ ಮತ್ತು ಮಾನಸಿಕ ಒತ್ತಡಗಳಿಂದ ಮುಕ್ತಿ ಪಡೆಯಲು ಯೋಗಾಭ್ಯಾಸ ಅವಶ್ಯಕ. ದೈಹಿಕ ಮತ್ತು ಮಾನಸಿಕ ರೋಗಗಳು ಬರಲು ಅಜ್ಞಾನವೇ ಕಾರಣ. ಆದುದರಿಂದ ರೋಗದಿಂದ ಮುಕ್ತವಾಗಿರಲು ಯೋಗ, ಪ್ರಾಣಾಯಮ ಮಾಡಬೇಕೆಂದರು.

ಡಾ. ಪ್ರಶಾಂತ, ಡಾ. ಎಲ್.ಪಿ ಕುಲಕರ್ಣಿ, ರತ್ನ ಅಂಗಡಿ, ಎನ್.ಸ್ವಾಮಿ ಸೇರಿದಂತೆ ನೂರಾರು ಜನ ಈ ಶಿಬಿರದಲ್ಲಿ ಭಾಗವಹಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.