ADVERTISEMENT

ಹೆಂಬೆರಾಳು, ಅರಷಿಣಗಿ ಗ್ರಾಮಕ್ಕೆ ನುಗ್ಗಿದ ನೀರು

ಜಿಲ್ಲೆಯಾದ್ಯಂತ ವ್ಯಾಪಕ ಮಳೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 5:38 IST
Last Updated 11 ಸೆಪ್ಟೆಂಬರ್ 2013, 5:38 IST
ಮಂಗಳವಾರ ಬೆಳಿಗ್ಗೆಯಿಂದ ಸತತ ಮಳೆ ಸುರಿದ ಪರಿಣಾಮ ರಾಯಚೂರು ತಾಲ್ಲೂಕು ಹೆಂಬೆರಾಳು ಗ್ರಾಮಕ್ಕೆ ಹಳ್ಳದ ನೀರು ನುಗ್ಗಿ ಗ್ರಾಮಸ್ಥರು ತೊಂದರೆ ಪಟ್ಟ ಹಿನ್ನೆಲೆಯಲ್ಲಿ ಗ್ರಾಮಕ್ಕೆ ರಾಯಚೂರು ಗ್ರಾಮೀಣ ವಿಧಾನ ಸಭಾ ಕ್ಷೇತ್ರ ಶಾಸಕ ತಿಪ್ಪರಾಜು ಹವಾಲ್ದಾರ ಭೇಟಿ ನೀಡಿದಾಗ ಗ್ರಾಮಸ್ಥರು, ಸುತ್ತಮುತ್ತಲಿನ ಜನ ಶಾಸಕರೊಂದಿಗೆ ಹಳ್ಳದ ಸೇತುವೆ ಮೇಲೆ ಹರಿಯುತ್ತಿದ್ದ ನೀರಿನಲ್ಲಿ ಸಾಗಿದರು

ರಾಯಚೂರು: ಜಿಲ್ಲೆಯಲ್ಲಿ ಮೂರ್ನಾ­ಲ್ಕು ದಿನಗಳಿಂದ ವ್ಯಾಪಕ ಮಳೆ ಸುರಿ­ಯುತ್ತಿದ್ದು, ಸೋಮವಾರ ಹಾಗೂ ಮಂಗಳವಾರ ಹೆಚ್ಚಿನ ಮಳೆ ಸುರಿದಿದೆ. ರಾಯಚೂರು ತಾಲ್ಲೂಕು ದೇವಸುಗೂ­ರಲ್ಲಿ ಗರಿಷ್ಠ 67.2 ಮಿ.ಮಿ ಹಾಗೂ ಕನಿಷ್ಠ ಸಿಂಧನೂರಲ್ಲಿ 0.4 ಮಿ.ಮಿ ಮಳೆ ಮಂಗಳವಾರ ಬೆಳಗಿನ ತನಕ ಸುರಿದಿದೆ.

ರಾಯಚೂರು ತಾಲ್ಲೂಕಿನ ಹೆಂಬೆ­ರಾಳು ಗ್ರಾಮ, ಅರಿಷಿಣಗಿ ಸೇರಿದಂತೆ ಕೆಲ ಗ್ರಾಮಗಳಿಗೆ ಹಳ್ಳದ ನೀರು ನುಗ್ಗಿ ಗ್ರಾಮಸ್ಥರು ಮಂಗಳವಾರ ಸಂಜೆ ತೊಂದರೆ ಪಟ್ಟರು. ರಾಯಚೂರು ನಗರದ ಸಿಯಾತಲಾಬ್‌, ಬಂಗಿಕುಂಟ, ಮಡ್ಡಿಪೇಟ ಪ್ರದೇಶದಲ್ಲಿ ಜನ ಮಳೆ ನೀರಿನಿಂದ ಸಮಸ್ಯೆ ಎದುರಿಸಿದರು. ಮಂಗಳವಾರ ರಾತ್ರಿಯೂ ಮಳೆ ಸುರರಿಯುತ್ತಿದ್ದರಿಂದ ಜನ ಆತಂಕ ಗೊಂಡಿದ್ದರು. ಹಟ್ಟಿ, ದೇವದುರ್ಗ, ಸಿಂಧನೂರಲ್ಲಿ ಭಾರಿ ಮಳೆ ಸುರಿಯಿತು.

ಜಿಲ್ಲೆಯಲ್ಲಿ ಮಂಗಳವಾರ ಬೆಳಗಿನವರೆಗೆ ಬಿದ್ದ ಮಳೆ ವಿವರ (ಮಿಲಿ ಮೀಟರ್‌ಗಳಲ್ಲಿ)ಇಂತಿದೆ.
ರಾಯಚೂರು ನಗರ– 0.8 ಮಿ.ಮಿ,  ಯರಗೇರಾ– 13 ಮಿ.ಮಿ, ಯರಮರಸ್–22.7, ಕಲ್ಮಲಾ 13.3, ದೇವಸುಗೂರು–62.2, ಜೇಗರಕಲ್‌–53, ಚಂದ್ರಬಂಡಾ–11, ಮಾನ್ವಿ–8.3, ಮಲ್ಲಟ– 31, ಸಿರವಾರ– 19, ಕುರಕುಂದಾ–11, ಪಾಮನಕಲ್ಲೂರು–14, ಸಿಂಧನೂರು–0.4, ಹೆಡಗಿನಾಳ–15.4, ಜಾಲಿಹಾಳ–10.2, ಜಾಲಹಳ್ಳಿ– 36, ದೇವದುರ್ಗ–5, ಗಲಗ–26, ಗಬ್ಬೂರು–11.2, ಅರಕೇರಾ–27.8, ಲಿಂಗಸುಗೂರು 7.0, ಹಟ್ಟಿ–25 ಮಿ.ಮಿ ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.