ADVERTISEMENT

ರಾಯಚೂರಿನಲ್ಲಿ ಇಂದು 10 ಮಂದಿಗೆ ಕೋವಿಡ್‌ ದೃಢ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 12:44 IST
Last Updated 5 ಜುಲೈ 2020, 12:44 IST

ರಾಯಚೂರು:ಜಿಲ್ಲೆಯಲ್ಲಿ ಮತ್ತೆ 10 ಜನರಿಗೆ ಕೋವಿಡ್‌ ದೃಢವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿದ್ದವರ ಸಂಖ್ಯೆ 141 ರಷ್ಟಾಗಿದೆ.

ಇದುವರೆಗೂ ಜಿಲ್ಲೆಯಲ್ಲಿ ಒಟ್ಟು 569 ಜನರಿಗೆ ಸೋಂಕು ಪತ್ತೆಯಾದಂತಾಗಿದ್ದು, ಅದರಲ್ಲಿ 422 ಜನರು ಗುಣಮುಖರಾಗಿದ್ದಾರೆ. ಇತರೆ ರೋಗಗಳಿಂದ ಬಳಲುತ್ತಿದ್ದ ಇಬ್ಬರು ಕೋವಿಡ್‌ನಿಂದ ಮೃತರಾಗಿದ್ದಾರೆ.

ಕೋವಿಡ್‌ ಶಂಕೆಯಿಂದ ಭಾನುವಾರ ವಿವಿಧೆಡೆ ಒಟ್ಟು 273 ಜನರ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಪ್ರಯೋಗಾಲಯಕ್ಕೆ ಕಳುಹಿಸಿರುವ ಒಟ್ಟು ಮಾದರಿಗಳಲ್ಲಿ ಇನ್ನೂ 1,706 ವರದಿಗಳು ಬರಬೇಕಿದೆ.

ADVERTISEMENT

ಹೊರರಾಜ್ಯಗಳು ಮತ್ತು ವಿದೇಶದಿಂದ ಬಂದಿರುವ ಒಟ್ಟು 150 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅದರಲ್ಲಿ ರಾಯಚೂರು ತಾಲ್ಲೂಕಿನಲ್ಲಿ 93, ಸಿಂಧನೂರು ತಾಲ್ಲೂಕಿನಲ್ಲಿ 14, ಮಾನ್ವಿ ತಾಲ್ಲೂಕಿನಲ್ಲಿ 22, ಲಿಂಗಸುಗೂರು ತಾಲ್ಲೂಕಿನಲ್ಲಿ 21 ಜನರಿದ್ದಾರೆ.

ಭಾನುವಾರ ಕೋವಿಡ್‌ ದೃಢವಾಗಿರುವವರಲ್ಲಿ ಮೂವರು ರಾಯಚೂರು, ಮಾನ್ವಿ, ಸಿಂಧನೂರು ತಲಾ ಒಬ್ಬರು, ಲಿಂಗಸುಗೂರಿನ ಐದು ಜನರಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ಪತ್ತೆಯಾಗಿರುವ 569 ಪ್ರಕರಣಗಳಲ್ಲಿ ಅತಿಹೆಚ್ಚು 338 ದೇವದುರ್ಗ ತಾಲ್ಲೂಕು, 120 ರಾಯಚೂರು, 37 ಲಿಂಗಸುಗೂರು, 40 ಮಾನ್ವಿ ಹಾಗೂ 34 ಸಿಂಧನೂರು ತಾಲ್ಲೂಕಿನವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.