ರಾಯಚೂರು: ಶ್ರೀಮನ್ಮಧ್ವಾಚಾರ್ಯ ಮೂಲಮಹಾಸಂಸ್ಥಾನ ಹಾಗೂ ರಾಘವೇಂದ್ರಸ್ವಾಮಿಗಳ ಮಠದ ಆಶ್ರಯದಲ್ಲಿ ಜುಲೈ 22 ರಿಂದ ಸೆಪ್ಟೆಂಬರ್ 8ರ ವರೆಗೆ ಮಂತ್ರಾಲಯ ಮಠದ ಆವರಣದಲ್ಲಿ ಸುಬುಧೇಂದ್ರ ತೀರ್ಥರಿಂದ 13ನೇ ಚಾತುರ್ಮಾಸ್ಯ ದೀಕ್ಷಾ ಮಹೋತ್ಸವ ನಡೆಯಲಿದೆ.
ಸುಬುಧೇಂದ್ರ ತೀರ್ಥರಿಂದ ಶ್ರೀಮನ್ನಾಯಸುಧಾ, ತಾತ್ಪರ್ಯಚಂದ್ರಿಕಾ ಮುಂತಾದ ಸಚ್ಛಾಸ್ತ್ರ ಗ್ರಂಥಗಳ, ಅನೇಕ ಟಿಪ್ಪಣಿಗಳ ವಿಶೇಷ ವಿಚಾರಗಳಿಂದ ಕೂಡಿದ ಪಾಠಗಳು ನಡೆಯಲಿದೆ.
ಗಿರಿ ಆಚಾರ್ಯ ಚಿಂತನೆ ಮಂಡಿಸಲಿದ್ದಾರೆ. ವಿವಿಧ ವಿದ್ವಾಂಸರಿಂದ ಧಾರ್ಮಿಕ ಪ್ರವಚನ ಮತ್ತು ಶ್ರೀಗಳಿಂದ ಅನುಗ್ರಹಸಂದೇಶ, ಮುದ್ರಾಧಾರಣೆ, ಫಲಮಂತ್ರಾಕ್ಷತೆ ಪ್ರದಾನ, ಸಂಸ್ಥಾನಪೂಜೆ, ಸಂಗೀತ ದಾಸವಾಣಿ ಹಾಗೂ ದಾಸಸಾಹಿತ್ಯ, ಟಿ.ಟಿ.ಡಿ ದಾಸಸಾಹಿತ್ಯ ಪ್ರಾಜೆಕ್ಟ್ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಜುಲೈ 22 ರಿಂದ 31 ರವರೆಗೆ ನವವಿಧ ಭಕ್ತಿಯ ವೈಶಿಷ್ಟ್ಯ, ಭೀಮಸೇನದೇವರು-ಭಾಗವತ ಧರ್ಮಗಳು, ಹರಿದಾಸರು ಕಂಡ ರಾಯರು, ಗಜೇಂದ್ರಮೋಕ್ಷ, ಮಹಾಲಕ್ಷ್ಮಿಯ ಹರಿಭಕ್ತಿ ಕಾರ್ಯಕ್ರಮ ನಡೆಯಲಿದೆ.
ಆಗಸ್ಟ್ 1 ರಿಂದ 31 ರವರೆಗೆ ರಾಘವೇಂದ್ರತೀರ್ಥ ಗುರುಸಾರ್ವಭೌಮರ 354ನೇ ಆರಾಧನ ಮಹೋತ್ಸವ ಸೇರಿದಂತೆ ವಿವಿಧ ಆಚರಣೆಗಳು ನಡೆಯಲಿದೆ.
ಸೆಪ್ಟೆಂಬರ್ 1 ರಿಂದ 8ರವರೆಗೆ ಫಲವಿದುಬಾಳುದಕೆ, ಪಂಚಮಹಾಯಜ್ಞಸಂಧಿ, ಗರ್ಭಸ್ಥಜೀವಕೃತ ಭಗವತ್ ಸ್ತುತಿ, ಕರ್ಮಯೋಗ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ರಾಘವೇಂದ್ರ ಮಠ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.