ADVERTISEMENT

ಮಸ್ಕಿ: ಕೋತಿ ಕಚ್ಚಿ 5 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 5:33 IST
Last Updated 21 ಜೂನ್ 2021, 5:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಸ್ಕಿ: ಪಟ್ಟಣದ ವಿವಿಧೆಡೆ ಕೋತಿಯೊಂದು ಓಡಾಡಿಕೊಂಡು ಜನರನ್ನು ಗಾಬರಿಗೊಳಿಸಿದ್ದಲ್ಲದೆ, ಐದು ಜನರನ್ನು ಕಚ್ಚಿ ಗಾಯಗೊಳಿಸಿದ ಘಟನೆ ಭಾನುವಾರ ನಡೆದಿದೆ.

ತೇರು ಬೀದಿ‌ ರಸ್ತೆ ಮುಖಾಂತರ ತೆರಳುತ್ತಿದ್ದ ಇಬ್ಬರು ಬಾಲಕರು ಸೇರಿ ಜನರ ಕೈಗಳಿಗೆ ಮತ್ತು ಕಾಲುಗಳಿಗೆ ಪರಿಚಿದ್ದಲ್ಲದೆ, ಕಚ್ಚಿದೆ. ಗಾಯಗೊಂಡವರು ಖಾಸಗಿ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆಗೆ ಸುದ್ದಿ ಮುಟ್ಟಿಸಿದ್ದಾರೆ.

ಅರಣ್ಯ ಇಲಾಖೆಗೆ ಈ ಕುರಿತು ವರದಿ ನೀಡಲಾಗಿದ್ದು ಕೋತಿಗಳನ್ನು ಹಿಡಿದು ಹೊರ ಸಾಗಿಸುವಂತೆ ಸೂಚಿಸಲಾಗಿದೆ ಎಂದು ಪಿಎಸ್‌ಐ ಸಿದ್ದರಾಮ ತಿಳಿಸಿದ್ದಾರೆ.

ADVERTISEMENT

ಪಟ್ಟಣದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಜನ ಭಯಭೀತರಾಗಿದ್ದಾರೆ. ಕೂಡಲೇ ಕೋತಿಗಳನ್ನು ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು‌ ಸಾರ್ವಜನಿಕರುಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.