ADVERTISEMENT

72 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2014, 5:21 IST
Last Updated 8 ಜನವರಿ 2014, 5:21 IST

ದೇವದುರ್ಗ: ಪಟ್ಟಣದಲ್ಲಿ ಈಚೆಗೆ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿರುವ 72 ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಡಿ. ಹುನುಗುಂದ ತಿಳಿಸಿದ್ದಾರೆ.

1ರಿಂದ 4ನೇ ತರಗತಿ, 5ರಿಂದ 7ನೇ ತರಗತಿ ಮತ್ತು 8ರಿಂದ 10ನೇ ತರಗತಿಯ ಮಕ್ಕಳನ್ನು ಈಗಾಗಲೇ ಕ್ಲಸ್ಟ್‌ರ್‌ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿಭಾಗ­ವಾರು ಆಯ್ಕೆ ಮಾಡಲಾಯಿತು. ಅಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಮಾತ್ರ ತಾಲ್ಲೂಕು ಮಟ್ಟದಲ್ಲಿ ಭಾಗವಹಿಸಿದ್ದಾರೆ. ವೈಯಕ್ತಿಕ ಸ್ಪರ್ಧೆ, ಸಾಮೂಹಿಕ ಸ್ಪರ್ಧೆಯ ಮೂಲಕ ಒಟ್ಟು 72 ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜ. 16ರಂದು ಲಿಂಗಸುಗೂರಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ವೈಯಕ್ತಿಕ ವಿಭಾಗ 1ರಿಂದ 4ನೇ ತರಗತಿ: ಕಂಠ ಪಾಠ ಸ್ಪರ್ಧೆಯಲ್ಲಿ ಮಲ್ಲಕಾರ್ಜುನ (ಕನ್ನಡ),  ಭವಾನಿ (ಇಂಗ್ಲಿಷ್‌), ಸಾನಿಯಾ ಬೇಗಂ (ಉರ್ದು), ಸುಮಲತಾ (ತೆಲಗು), ವೇಣುಗೋಪಾಲ (ಧಾರ್ಮಿಕ ಪಠಣ ಸಂಸ್ಕೃತಿ), ಅಲಿಮಾ (ಅರೆಬಿಕ್‌), ಸ್ವಾಮಿ ವಿವೇಕಾನಂದ ಶಾಲೆ ಸುಂಕೇಶ್ವರ­ಹಾಳ ಸಹನಾ ದೇಸಾಯಿ (ಲಘು ಸಂಗೀತ), ವಂದನಾ (ಛದ್ಮ ವೇಷ), ಮಲ್ಲಕಾರ್ಜುನ (ಚಿತ್ರಕಲಾ), ದೇವಿ­ಲಾಲ (ಕಥೆ ಹೇಳುವುದು), ಭಾಗ್ಯ (ಅಭಿನಯ ಗೀತೆಗಳು), ಫಾರೂಕ್‌ (ಕ್ಲೇ ಮಾಡಲಿಂಗ್‌).

5ರಿಂದ 7ನೇ ತರಗತಿ:  ಕಂಠ ಪಾಠ ಸ್ಪರ್ಧೆಯಲ್ಲಿ ಈರಣ್ಣ (ಇಂಗೀಷ್‌), ಮಾಲಾಶ್ರೀ (ಹಿಂದಿ), ವೆಂಕಟೇಶ (ತೆಲಗು), ಅಂಬ್ರೇಶ (ಧಾರ್ಮಿಕ ಪಠಣ ಸಂಸ್ಕೃತಿ), ಎಂ.ಡಿ.ಮುದಾಶೀರ್‌ (ಅರೆಬಿಕ್‌), ಅಮೃತಾ(ಲಘು ಸಂಗೀತ), ಮುನಿಸ್ವಾಮಿ (ಛದ್ಮವೇಷ), ಶಿವರಾಜ (ಚಿತ್ರಕಲಾ), ರವಿ (ಕಥೆ ಹೇಳುವುದು), ದೇವರಾಜ (ಅಭಿನಯ ಗೀತೆಗಳು), ಮೌನೇಶ (ಕ್ಲೇ ಮಾಡಲಿಂಗ್‌), ವೆಂಕಟೇಶ (ಯೋಗಾಸನ).
8ರಿಂದ 10ನೇ ತರಗತಿ: ಕಂಠ ಪಾಠ ಸ್ಪರ್ಧೆಯಲ್ಲಿ ಬಸಮ್ಮ (ಕನ್ನಡ), ಅಭಿಷೇಕಾ (ಇಂಗ್ಲಿಷ್‌), ನಿಲೋಫರ್‌ (ಹಿಂದಿ), ಚೆನ್ನಮ್ಮ (ಧಾರ್ಮಿಕ ಪಠಣ ಸಂಸ್ಕೃತಿ), ಆಸೀಫ್‌(ಅರೆಬಿಕ್‌), ಮೌನೇಶ (ಯೋಗಾಸನ), ಚೈತ್ರಾ (ಹಿಂದೂ­ಸ್ತಾನಿ ಸಂಗೀತ), ವಿಜಯ ಲಕ್ಷ್ಮೀ(ಜಾನಪದ), ಲಕ್ಷ್ಮೀ (ಭಾವಗೀತೆ), ನಿಂಗಮ್ಮ (ಭರತ ನಾಟ್ಯ), ಗಿರಿವಾಣಿ(ಛದ್ಮವೇಷ), ವೇಣು (ಕ್ಷೇ ಮಾಡಲಿಂಗ್‌), ಸುಜಾತ (ಆಶುಭಾಷಣ), ಕಿರಣ(ಮಿಮಿಕ್ರಿ), ಅಕ್ಷತಾ(ಪ್ರಬಂಧ ರಚನೆ), ರಮೇಶ (ಚರ್ಚಾ ಸ್ಪರ್ಧೆ), ಶಾಂತಮೂರ್ತಿ (ಚಿತ್ರಕಲಾ), ಸುಪ್ರಿತಾ (ರಂಗೋಲಿ), ಮುಬಾಶಿರ್‌(ಘಜಲ್‌).

ಸಾಮೂಹಿಕ ವಿಭಾಗ 1ರಿಂದ 4ನೇ ತರಗತಿ: ವೈಶಾಲಿ ಸಂಗಡಿಗರು (ಜಾನ­ಪದ ನೃತ್ಯ), ಸುಶ್ಮಿತಾ ಸಂಗಡಿಗರು (ದೇಶಭಕ್ತಿ ಗೀತೆ), ಸಿಂಧು ಸಂಗಡಿಗರು (ಕೋಲಾಟ), ಮುಂಜು­ನಾಥ ಸಂಗಡಿಗರು(ಕ್ವಿಝ).

5ರಿಂದ 7ನೇ ತರಗತಿ: ಖಾಜಾಬಿ ಸಂಗಡಿಗರು(ಜಾನಪದ ನೃತ್ಯ), ಪೂಜಾ ಸಂಗಡಿಗರು(ದೇಶಭಕ್ತಿ ಗೀತೆ), ರಶ್ಮಿ ಸಂಗಡಿಗರು(ಕೋಲಾಟ), ಕಿರಣ ಸಂಗಡಿಗರು(ಕ್ವಿಝ).

8ರಿಂದ 10ನೇ ತರಗತಿ: ಸವಿತಾ ಸಂಗಡಿಗರು (ನಾಟಕ), ರಾಮಣ್ಣ ಸಂಗಡಿಗರು(ಕ್ವಿಝ), ರುಖಯಾ ಸಂಗ­ಡಿ­ಗರು(ಖವ್ವಾಲಿ), ಪ್ರತಿಭಾ ಸಂಗಡಿ­ಗರು(ಜಾನಪದ ನೃತ್ಯ), ಶಿಲ್ಪಾ ಸಂಗ-­ಡಿಗರು(ಕೋಲಾಟ) ಮತ್ತು ಅಮರೇಶ, ಬಸವರಾಜ (ವಿಜ್ಞಾನ ಮಾದರಿ ತಯಾರಿಕೆ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.