ADVERTISEMENT

ರಾಯಚೂರು | PDO ಬಸವರಾಜ ವಸ್ತ್ರದಗೆ ಪಂಚಾಯಿತಿ ಅಭಿವೃದ್ಧಿ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 5:46 IST
Last Updated 5 ಸೆಪ್ಟೆಂಬರ್ 2025, 5:46 IST
   

ರಾಯಚೂರು: ‘ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒಗಳ ಶ್ರೇಷ್ಠ ಸೇವೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ತಿಂಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ‘ಅತ್ಯುತ್ತಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ’ ಪ್ರಶಂಶಾ ಪತ್ರ ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಪ್ರಕಟಿಸಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಲಿಂಗಸುಗೂರು ತಾಲ್ಲೂಕಿನ ನೀರಲಕೇರೆ ಗ್ರಾಮ ಪಂಚಾಯಿತಿಯು ಆಗಸ್ಟ್ ನಲ್ಲಿ ವಿವಿಧ ಯೋಜನೆಗಳಲ್ಲಿ ಪ್ರಗತಿ ಸಾಧಿಸಿದ ಪಿಡಿಒ ಬಸವರಾಜ ವಸ್ತ್ರದ ರವರಿಗೆ ‘ ಅತ್ಯುತ್ತಮ ಪಂಚಾಯಿತಿ ಅಭಿವೃದ್ಧಿ ಪ್ರಶಸ್ತಿ‘ ಪ್ರದಾನ ಮಾಡಿ ಅವರು ಮಾತನಾಡಿದರು.

‘ಆಸಕ್ತಿಯಿಂದ ಕಾರ್ಯನಿರ್ವಹಿಸುವವರ ಸೇವೆ ಗುರುತಿಸಿ ಪ್ರಂಶಸಾ ಪತ್ರ ವಿತರಿಸಿದಲ್ಲಿ ಪಿಡಿಒಗಳ ಕಾರ್ಯಕ್ಷಮತೆ ಇನ್ನಷ್ಟು ಹೆಚ್ಚಲಿದೆ. ಅವರು ಇನ್ನೂ ಹೆಚ್ಚಿನ ರೀತಿಯಲ್ಲಿ ಕೆಲಸ ಮಾಡಲು ಉತ್ತೇಜನ ನೀಡಿದಂತೆ ಆಗಲಿದೆ‘ ಎಂದು ಹೇಳಿದರು.

ಜಿ.ಪಂ ಉಪ ಕಾರ್ಯದರ್ಶಿ ಹಾಲಸಿದ್ಧಪ್ಪ ಪೂಜೇರಿ, ಯೋಜನಾ ನಿರ್ದೇಶಕ ಶರಣಬಸವರಾಜ ಕೆಸರಟ್ಟಿ, ಮುಖ್ಯ ಲೆಕ್ಕಾಧಿಕಾರಿ, ವಿಜಯ ಶಂಕರ, ಮುಖ್ಯ ಯೋಜನಾಧಿಕಾರಿ ಟಿ.ರೋಣಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಯೊಜನೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.

ADVERTISEMENT

‘ಕೇಳುವವರು ಇಲ್ಲದಿದ್ದರೆ ಕೆಲಸ ಮಾಡುವುದಿಲ್ಲವೆ?’

ರಾಯಚೂರು: ‘ಉದ್ಯೋಗ ಖಾತ್ರಿ ಯೋಜನೆಯಡಿ ಕಡಿಮೆ ಪ್ರಗತಿ ಸಾಧಿಸಿದ ಸಹಾಯಕ ನಿರ್ದೇಶಕರಿಗೆ ಶೋಕಾಸ್ ನೋಟಿಸ್ ನೀಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಪಿಡಿಒ ಹಾಗೂ ತಾಲ್ಲೂಕು ಪಂಚಾಯಿತಿ ಇಒಗಳೊಂದಿಗೆ ನರೇಗಾ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿ,‘ಕೇಳುವವರು ಇಲ್ಲದಿದ್ದರೆ ಕೆಲಸ ಮಾಡುವುದಿಲ್ಲವೆ?’ ಎಂದು ಖಾರವಾಗಿಯೇ ಪ್ರಶ್ನಿಸಿದರು.

ಪಿಡಿಒ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಆಯಾ ತಾಲ್ಲೂಕು ಪಂಚಾಯಿತಿ ಇಒಗಳು ಪ್ರತಿ ವಾರ ಸಮನ್ವಯ ನಡೆಸಬೇಕು ಎಂದು ಸೂಚನೆ ನೀಡಿದರು.

‘ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಒಟ್ಟು 1,77,208 ಕಾಮಗಾರಿ ಮಾಡಬೇಕಿದೆ. ಆಗಸ್ಟ್‌ನಲ್ಲಿ ಕೇವಲ 5245 ಕಾಮಗಾರಿ ಕೈಗೊಳ್ಳಲಾಗಿದೆ. ರಾಯಚೂರು, ಮಾನ್ವಿ ಹಾಗೂ ದೇವದುರ್ಗ ಎಡಿಗಳ ಪ್ರಗತಿ ಕಂಡು ಬಂದಿಲ್ಲ. ಈ ತಾಲೂಕುಗಳ ನರೇಗಾ ಎಡಿಗಳಿಗೆ ಕಾರಣ ಕೇಳಿ ನೋಟಿಸ್
ನೀಡಬೇಕು’ ಎಂದು ಸೂಚಿಸಿದರು.

‘ಪಿಡಿಒಗಳು ಮುಖ್ಯವಾದ ಕೆಲಸಗಳನ್ನೇ ಮಾಡುತ್ತಿಲ್ಲ. ಇಒಗಳೂ ಕೂಡ ಸರಿಯಾಗಿ
ಗಮನಹರಿಸುತ್ತಿಲ್ಲ. ಅವರಿಗೂ ಜವಾಬ್ದಾರಿ ಇರಬೇಕು. ಮುಂದಿನ ಸಭೆಯಲ್ಲಿ
ಯೋಜನಾ ಬದ್ಧವಾಗಿ ಪ್ಯಾರಾ ಗಳನ್ನು ಕ್ಲಿಯರ್ ಮಾಡಬೇಕು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆರ್.ಸಿದ್ದಪ್ಪ ಪೂಜಾರಿ, ಮುಖ್ಯ ಯೋಜನಾಧಿಕಾರಿ ಡಾ.ಟಿ.ರೋಣಿ, ಮುಖ್ಯ ಯೋಜನಾ ನಿರ್ದೇಶಕ ಶರಣಬಸವ, ಮುಖ್ಯ ಲೆಕ್ಕಾಧಿಕಾರಿ ವಿಜಯಶಂಕರ ಸೇರಿದಂತೆ ವಿವಿಧ ತಾಲೂಕುಗಳ ಇಒ, ಗ್ರಾ.ಪಂ ಪಿಡಿಒಗಳು ಉಪಸ್ಥಿತರಿದ್ದರು.

ರಾಯಚೂರು ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ನರೇಗಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿದ್ದ ತಾಲ್ಲೂಕು ಪಂಚಾಯಿತಿ ಇಒಗಳು ಹಾಗೂ ಪಂಚಾಯಿತಿ ಅಭಿವೃದ್ಧಿಅಧಿಕಾರಿಗಳು

ಮಸ್ಕಿ ತಾಲ್ಲೂಕಿನಲ್ಲಿ ರೇಷ್ಮೆ ಇಲಾಖೆ ಪ್ರಗತಿ ಶೂನ್ಯ ಕೃಷಿ ಇಲಾಖೆಯಿಂದ ನರೇಗಾ ಯೋಜನೆ ಹಾಳು ಗುಂಜಳ್ಳಿಯಲ್ಲಿ ಒಂದೂ ಕಾಮಗಾರಿ ಪೂರ್ಣಗೊಂಡಿಲ್ಲ

ಜಿಲ್ಲೆಯಲ್ಲಿ ಸರ್ಕಾರದ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ನಿರ್ಲಕ್ಷ್ಯವಹಿಸಿದ ಹಾಗೂ ಶೂನ್ಯ ಪ್ರಗತಿ ಸಾಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು.
ಈಶ್ವರಕುಮಾರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ

ಯೋಜನೆಗಳಲ್ಲಿ ಸಾಧಿಸಿದ ಪ್ರಗತಿ

ಪಂಚಾಯಿತಿ–ಪಿಡಿಒ–ಪಡೆದ ಅಂಕ ನೀರಲಕೇರಿ–ಬಸವರಾಜ ವಸ್ತ್ರ 75 ಬ್ಯಾಗವಾಟ್–ಶಿವಕುಮಾರ 73 ರಾಮತ್ನಾಳ–ಮೋಹಿನ್‌ ಪಾಷಾ–73 ಅಮರಾಪುರ– ವೆಂಕಟೇಶ–73 ಉದ್ಭಾಳ(ಯು) ಬಸವರಾಜ –72 ಹರವಿ–ಪ್ರದೀಪ–69 ಚಿಕ್ಕಸುಗೂರು–ಸರೋಜಮ್ಮ–59

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.