ADVERTISEMENT

ಲಿಂಗಸುಗೂರು: ಕಾಲುವೆಗೆ ಈಜಲು ಹೋದ ಯುವಕ ನೀರುಪಾಲು

​ಪ್ರಜಾವಾಣಿ ವಾರ್ತೆ
Published 3 ಮೇ 2024, 14:08 IST
Last Updated 3 ಮೇ 2024, 14:08 IST

ಲಿಂಗಸುಗೂರು: ತಾಲ್ಲೂಕಿನ ಜಾವೂರು ಕ್ರಾಸ್‍ ಬಳಿಯ ನಾರಾಯಣಪುರ ಬಲದಂಡೆ ಮುಖ್ಯ ನಾಲೆಗೆ ಈಜಲು ಹೋಗಿದ್ದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಜರುಗಿದೆ.

ತಾಲ್ಲೂಕಿನ ನಾಗರಹಾಳ ಗ್ರಾಮದ ಬಸವರಾಜ ಹುಸೇನಮ್ಮ (22) ಮೃತ ಯುವಕ.

ಬಿಸಿಲಿನ ಬೇಗೆ ತಡೆದುಕೊಳ್ಳಲಾಗದೆ ದೇಹ ತಂಪಾಗಿಸಿಕೊಳ್ಳಲು ಕಾಲುವೆಗೆ ಈಜಲು ತೆರಳಿದ್ದ ಎಂದು ಜನರು ತಿಳಿಸಿದ್ದಾರೆ.

ADVERTISEMENT

ಅಗ್ನಿಶಾಮಕ ಠಾಣಾಧಿಕಾರಿ ಹೊನ್ನಪ್ಪ ದೊಡಮನಿ ನೇತೃತ್ವದಲ್ಲಿ ಸಿಬ್ಬಂದಿ ಸ್ಥಳಕ್ಕೆ ತೆರಳಿ ಸ್ಥಳೀಯರ ಸಹಕಾರದಿಂದ ಮೃತದೇಹ ಹೊರ ತೆಗೆದಿದ್ದಾರೆ.

ಎರಡು ದಿನಗಳ ಹಿಂದೆ ಇದೇ ಸ್ಥಳದಲ್ಲಿ ಬೆಂಡೋಣಿ ಗ್ರಾಮದ ಇಬ್ಬರು ಯುವಕರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.