ADVERTISEMENT

ಸಿರವಾರ: ಜೋಳದ ಬೆಳೆಗೆ ಆಕಸ್ಮಿಕ ಬೆಂಕಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2025, 15:03 IST
Last Updated 4 ಫೆಬ್ರುವರಿ 2025, 15:03 IST
ಸಿರವಾರ ತಾಲ್ಲೂಕಿನ ಸಿಂಗಡದಿನ್ನಿ ಹೊರವಲಯದ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಜೋಳದ ಬೆಳೆಗೆ ಅಕಸ್ಮಿಕ ಬೆಂಕಿ ಬಿದ್ದು ಬೆಳೆ ಸಂಪೂರ್ಣ ನಾಶವಾದ ಘಟನೆ ಸಂಭವಿಸಿದೆ
ಸಿರವಾರ ತಾಲ್ಲೂಕಿನ ಸಿಂಗಡದಿನ್ನಿ ಹೊರವಲಯದ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಜೋಳದ ಬೆಳೆಗೆ ಅಕಸ್ಮಿಕ ಬೆಂಕಿ ಬಿದ್ದು ಬೆಳೆ ಸಂಪೂರ್ಣ ನಾಶವಾದ ಘಟನೆ ಸಂಭವಿಸಿದೆ   

ಸಿರವಾರ: ತಾಲ್ಲೂಕಿನ ಸಿಂಗಡದಿನ್ನಿ ಹೊರವಲಯದ ಜಮೀನಿನಲ್ಲಿ ಸೋಮವಾರ ಸಂಜೆ ಕಟಾವಿಗೆ ಬಂದಿದ್ದ ಜೋಳದ ಬೆಳೆಗೆ ಆಕಸ್ಮಿಕ ಬೆಂಕಿ ಬಿದ್ದು ಬೆಳೆ ಸಂಪೂರ್ಣ ನಾಶವಾಗಿದೆ. 

ಶರಣಪ್ಪ ಶಾಖಾಪುರ, ಮತ್ತು ಚನ್ನಪ್ಪ ಎಂಬುವವರಿಗೆ ಸೇರಿದ ಜಮೀನಿನ ಪಕ್ಕದ ಜಮೀನುಗಳಲ್ಲಿ ಕಟಾವಿನ ನಂತರ ಉಳಿದಿದ್ದ ಕಸ ತೆಗೆಯಲು ಬೆಂಕಿ ಹಚ್ಚಲಾಗಿತ್ತು, ಗಾಳಿಗೆ ಬೆಂಕಿಯ ಕಿಡಿ ಬೆಳೆಯಿದ್ದ ಜಮೀನಿನ ಬೆಳೆಗೆ ತಗುಲಿ ಈ ಘಟನೆ ನಡೆದಿದೆ.

5 ಎಕರೆ ಜಮೀನಿನಲ್ಲಿ ಕಟಾವಿಗೆ ಬಂದಿದ್ದ ಜೋಳದ ಬೆಳೆ ನಾಶದಿಂದ ₹2.85 ಲಕ್ಷಕ್ಕೂ ಅಧಿಕ ನಷ್ಟವಾಗಿದೆ.

ADVERTISEMENT

ಪರಿಹಾರಕ್ಕೆ ಒತ್ತಾಯ: ಬೆಳೆದು ನಿಂತ ಜೋಳದ ಬೆಳೆಗೆ ಬೆಂಕಿ ತಗುಲಿ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.