ADVERTISEMENT

ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿ ಇಂದಿನಿಂದ

18 ದಿನಗಳಲ್ಲಿ 11,828 ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ

ಚಂದ್ರಕಾಂತ ಮಸಾನಿ
Published 8 ಆಗಸ್ಟ್ 2025, 7:24 IST
Last Updated 8 ಆಗಸ್ಟ್ 2025, 7:24 IST
ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ
ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ   

ರಾಯಚೂರು: ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗಾಗಿಯೇ ಇಲ್ಲಿಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಆಗಸ್ಟ್ 8ರಿಂದ 25ರವರೆಗೆ ನಡೆಯಲಿರುವ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ಸಕಲ ಸಿದ್ಧತೆ ಮಾಡಲಾಗಿದೆ.

ಸೇನಾ ರ‍್ಯಾಲಿಯಲ್ಲಿ 11,828 ಅಭ್ಯರ್ಥಿಗಳು ಭಾಗವಹಿಸುವ ನಿರೀಕ್ಷೆ ಇದ್ದು. ನೇಮಕಾತಿ ರ‍್ಯಾಲಿ ಅಚ್ಚುಕಟ್ಟಾಗಿ ನಡೆಯುವಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ರ‍್ಯಾಲಿಯಲ್ಲಿ ಹೆಚ್ಚು ಜನ ಪಾಲ್ಗೊಳ್ಳುವುದರಿಂದ ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಪೆಂಡಾಲ್ ಹಾಕಲಾಗಿದೆ. ವೇದಿಕೆ ಮುಂಭಾಗ ವಿದ್ಯುತ್ ದೀಪ, ಬ್ಯಾರಿಕೇಡ್ ವ್ಯವಸ್ಥೆ, ಹಾಗೂ ತ್ಯಾಜ್ಯದ ತೊಟ್ಟಿಗಳ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಉಚಿತ ವಸತಿ, ಊಟದ ವ್ಯವಸ್ಥೆ: ಅಭ್ಯರ್ಥಿಗಳಿಗೆ ಉಚಿತ ವಸತಿ, ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಅಕ್ಕಿ ಗಿರಣಿ ಮಾಲೀಕರು ಉಚಿತ ಅಕ್ಕಿ, ತರಕಾರಿ ಸಗಟು ಮಾರಾಟ ಮಾಡುವ ವ್ಯಾಪಾರಿಗಳು ತರಕಾರಿ ಉಚಿತವಾಗಿ ಕೊಡಲು ಮುಂದೆ ಬಂದಿದ್ದಾರೆ.

ಜಿಲ್ಲಾಡಳಿತ, ಶ್ರೀಈಶ್ವರಿ ದೇವಸ್ಥಾನ ಸಮಿತಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಆಶಾಪುರ ರಸ್ತೆಯ ವಾಲ್ಮೀಕಿ ಭವನ, ಮಂತ್ರಾಲಯ ರಸ್ತೆಯ ಬಂಜಾರಾ ಭವನ, ಮಾದರಿ ಪದವಿ ಕಾಲೇಜು, ಗಾಂಧಿ ಚೌಕ್‌ನಲ್ಲಿರುವ ಸಂತೋಷಿ ಹಬ್‌ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣದಿಂದ ವಸತಿನಿಲಯಗಳಿಗೆ ತೆರಳಲು ರಿಯಾಯಿತಿ ದರದಲ್ಲಿ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ವಸತಿನಿಲಯಗಳಿಂದ ಸೇನಾ ನೇಮಕಾತಿ ಸ್ಥಳದ ವರೆಗೂ ಶಾಲಾ ವಾಹನಗಳ ವ್ಯವಸ್ಥೆ ಮಾಡಲಾಗಿದೆ.

ಅಡುಗೆದಾರರು, ವಾರ್ಡನ್ ನಿಯೋಜನೆ:

ಸೇನಾ ನೇಮಕಾತಿ ರ‍್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಊಟ, ವಸತಿಯ ವ್ಯವಸ್ಥೆಗೆ ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿನ 36 ಅಡುಗೆಯವರು ಹಾಗೂ 19 ವಾರ್ಡನ್‌ಗಳನ್ನು ನಿಯೋಜಿಸಲಾಗಿದೆ.

ಅಭ್ಯರ್ಥಿಗಳಿಗೆ ಉಚಿತ ವಸತಿ, ಕುಡಿಯುವ ನೀರು, ಬಳಕೆ ನೀರು, ಊಟ ಮತ್ತು ಉಪಾಹಾರ, ಸ್ನಾನಗೃಹ ಹಾಗೂ 100 ಸಂಚಾರಿ ಶೌಚಾಲಯಗಳ ವ್ಯವಸ್ಥೆ ಮಾಡಲಾಗಿದೆ.

ನಿಯೋಜನೆಗೊಂಡ ಸಿಬ್ಬಂದಿ ಕಡ್ಡಾಯವಾಗಿ ಆಗಸ್ಟ್ 8 ರಿಂದ ಪ್ರತಿದಿನ ಬೆಳಗ್ಗೆ 6 ಗಂಟೆಗೆ ನಿಯೋಜಿಸಿದ ಸ್ಥಳದಲ್ಲಿ ಕಡ್ಡಾಯವಾಗಿ ಕರ್ತವ್ಯಕ್ಕೆ ಹಾಜರಾಗಿ ತಮಗೆ ವಹಿಸಿದ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವೀಕ್ಷಕರ ನೇಮಕ:

ಕೃಷಿ ವಿಜ್ಞಾನಿಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 8ರಿಂದ 26ರವರೆಗೆ ನಡೆಯಲಿರುವ ಅಗ್ನಿಪಥ್ ಸೇನಾ ರ‍್ಯಾಲಿಗೆ ಸ್ಥಾನಿಕ ವೀಕ್ಷಕರನ್ನು ನೇಮಕ ಮಾಡಲಾಗಿದೆ.

ವಿವಿಧ ಜಿಲ್ಲೆಗಳ ಅಭ್ಯರ್ಥಿಗಳಿಗೆ ನಗರದ ಸಂತೋಷ ಹಬ್‌ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಮತ್ತು ಸಾರಿಗೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡಲು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗ, ವಿವಿಧ ವಸತಿ ನಿಲಯಗಳ ನಿಲಯಪಾಲಕರಿಗೆ ಸ್ಥಾನಿಕ ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಸ್ಥಾನಿಕ ವೀಕ್ಷಕರ ವಿವರ: ಆಗಸ್ಟ್ 7 ರಿಂದ 8ರವರೆಗೆ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ (ಉನ್ನತ್ತೀಕರಿಸಿದ) ಬಾಲಕರ ವಸತಿ ನಿಲಯದ ನಿಲಯಪಾಲಕ ಶಾಮಣ್ಣ 9741199211, ಆಗಸ್ಟ್ 10 ರಿಂದ 12ರವರೆಗೆ ರಾಯಚೂರಿನ ಜಹೀರಾಬಾದ್ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ನಿಲಯಪಾಲಕ ರವಿ 9845763768, ಆಗಸ್ಟ್ 13 ರಿಂದ 15ವರೆಗೆ ಬೋಳಮಾನದೊಡ್ಡಿ ರಸ್ತೆಯ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯಪಾಲಕ ರೇವಣ್ಣ ಸಿದ್ದಪ್ಪ 8904118926, ಆಗಸ್ಟ್ 16ರಿಂದ 18ವರೆಗೆ ರಾಯಚೂರಿನ ಡಾ.ಎಪಿಜೆ ಅಬ್ದುಲ್ ವಸತಿ ಶಾಲೆಯ ನಿಲಯಪಾಲಕ ಆದೇಶ 9964757896, ಆಗಸ್ಟ್ 19ರಿಂದ 21ವರೆಗೆ ಗಿಲ್ಲೇಸೂಗೂರು ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯಪಾಲಕ ವಿಶ್ವನಾಥ 9916679390, ಆಗಸ್ಟ್ 22ರಿಂದ 23ವರೆಗೆ ಯರಮರಸ್ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ನಿಲಯಪಾಲಕ ಗಂಗಣ್ಣ 9900494048, ಆಗಸ್ಟ್ 24ರಿಂದ 25ವರೆಗೆ ಸಿಂಧನೂರಿನ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ನಿಲಯಪಾಲಕ ಚನ್ನರೆಡ್ಡಿ 9108296944, ಆಗಸ್ಟ್ 26ರಂದು ಮಾನ್ವಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಹೆಚ್ಚುವರಿ ನಿಲಯಪಾಲಕ ರಮೇಶ 9632779401 ಅವರು ಸ್ಥಾನಿಕ ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ಆಗಮಿಸಿದ ಕೊಪ್ಪಳದ ವಿದ್ಯಾರ್ಥಿಗಳು
ಅಗ್ನಿಪಥ್ ಸೇನಾ ನೇಮಕಾತಿ ರ‍್ಯಾಲಿಗೆ ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ರೀಡಾಂಗಣದಲ್ಲಿ ಸಕಲ ವ್ಯವಸ್ಥೆ ಮಾಡಲಾಗಿದೆ
ಕೃಷಿ ವಿಶ್ವವಿದ್ಯಾಲಯದ ಎರಡನೇ ಗೇಟ್‌ ಸಮೀಪ ಸೇನಾ ರ್‍ಯಾಲಿಯಲ್ಲಿ ಭಾಗವಹಿಸಲಿರುವ ಅಭ್ಯರ್ಥಿಗಳಿಗೆ ಬೆಳಿಗ್ಗೆ ಉಪಾಹಾರ ಹಾಗೂ ಉಚಿತ ಊಟದ ವ್ಯವಸ್ಥೆ ಮಾಡಲಾಗಿದೆ
ಶಿವಾನಂದ ಭಜಂತ್ರಿ ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.