ADVERTISEMENT

ದೇವಸೂಗೂರು: ಏಡ್ಸ್ ಜಾಗೃತಿ ಆಂದೋಲನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 11:24 IST
Last Updated 4 ಡಿಸೆಂಬರ್ 2021, 11:24 IST
ಶಕ್ತಿನಗರ ಬಳಿಯ ದೇವಸೂಗೂರು ಗ್ರಾಮದಲ್ಲಿ ಏಡ್ಸ್‌ ಜಾಗೃತಿ ಆಂದೋಲನ ನಡೆಯಿತು
ಶಕ್ತಿನಗರ ಬಳಿಯ ದೇವಸೂಗೂರು ಗ್ರಾಮದಲ್ಲಿ ಏಡ್ಸ್‌ ಜಾಗೃತಿ ಆಂದೋಲನ ನಡೆಯಿತು   

ದೇವಸೂಗೂರು (ಶಕ್ತಿನಗರ): ‘ಏಡ್ಸ್ ತಡೆಗೆ ಜಾಗೃತಿ ಅಗತ್ಯ’ ಎಂದು ಗ್ರಾಮ ಪಂಚಾಯಿತಿ ಲೆಕ್ಕಾಧಿಕಾರಿ ಉದಯಕುಮಾರ ಅಭಿಪ್ರಾಯಪಟ್ಟರು.

ಏಡ್ಸ್ ಪ್ರಿವೆನ್‍ಷನ್ ಸೊಸೈಟಿ, ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಸಹಯೋಗದಲ್ಲಿ ಗ್ರಾಮದಲ್ಲಿ ನಡೆದ ಏಡ್ಸ್‌ ಜಾಗೃತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ,‘ಎಚ್‌ಐವಿ, ವೈರಸ್ ಮೂಲಕ ಹರಡುವ ರೋಗ. ಅದು ಮನುಷ್ಯನ ದೇಹದ ರೋಗನಿರೋಧಕ ಶಕ್ತಿಯನ್ನು ನಾಶ ಮಾಡುತ್ತದೆ. ಆಗ ವಿವಿಧ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಈ ರೋಗದ ಸ್ಥಿತಿಗತಿ ತಿಳಿಯಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎಂದರು.

ADVERTISEMENT

ಗದಗ ಜಿಲ್ಲೆಯ ಚಿಕ್ಕನರಗುಂದ ಗ್ರಾಮದ ಕನಕದಾಸ ಕಲಾ ತಂಡದ ಕಲಾವಿದರು, ಬೀದಿ ನಾಟಕದ ಮೂಲಕ ಏಡ್ಸ್‌ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಿದರು.

ದೇವಸೂಗೂರು ಉಪ ಆರೋಗ್ಯ ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಹುಲಿಗೆಮ್ಮ, ಆರೋಗ್ಯ ನಿರೀಕ್ಷಕ ಖಲೀಲ್ ಅಹ್ಮದ್, ಗ್ರಾಮ ಪಂಚಾಯಿತಿ ಸದಸ್ಯ ವಿ.ಬಾಬು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.