ADVERTISEMENT

‘ಅಧ್ಯಕ್ಷ ಸ್ಧಾನ ತಪ್ಪಲು ಹೂಲಗೇರಿ ಕಾರಣ’

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 15:49 IST
Last Updated 29 ಆಗಸ್ಟ್ 2024, 15:49 IST
ಸಿರಾಜುದ್ದಿನ್ ಖುರೇಷಿ
ಸಿರಾಜುದ್ದಿನ್ ಖುರೇಷಿ    

ಹಟ್ಟಿ ಚಿನ್ನದ ಗಣಿ: ‘ಸ್ಧಳೀಯ ಹಟ್ಟಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಧಾನ ಕಾಂಗ್ರೆಸ್ ಕೈತಪ್ಪಲು ಮಾಜಿ ಶಾಸಕ ಡಿ.ಎಸ್.ಹೂಲಗೇರಿ ಅವರೇ ಕಾರಣ’ ಎಂದು ಪ.ಪಂ.ಸದಸ್ಯ ಸಿರಾಜುದ್ದಿನ್ ಖುರೇಷಿ ಆರೋಪ ಮಾಡಿದ್ದಾರೆ.

ಹಟ್ಟಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ.ಪಂಯಲ್ಲಿ 6 ಜನ ಕಾಂಗ್ರೆಸ್ ಪಕ್ಷದ ಸದಸ್ಯರೇ ಇದ್ದರೂ ಬ್ಲಾಂಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಡಿ.ಎಸ್.ಹೂಲಗೇರಿ ಅವರು ಪಕ್ಷೇತರ ಅಭ್ಯರ್ಥಿಯ ಜತೆ ಹೊಂದಾಣಿಕೆ ಮಾಡಿಕೊಂಡು, ಅಧ್ಯಕ್ಷ ಪಟ್ಟ ಬಿಟ್ಟು ಕೊಡಬೇಕಾಯಿತು. 25 ವರ್ಷದಿಂದ ಕಾಂಗ್ರೆಸ್‌ ಪಕ್ಷಕ್ಕೆ ದುಡಿದ ನನಗೂ ಮೋಸ ಮಾಡಿದ್ದಾರೆ, ಇದನ್ನು ಖಂಡಿಸಬೇಕು’ ಎಂದರು.

‘ನಾನು ಅಮರೇಗೌಡ ಬಯ್ಯಾಪೂರ ಅವರ ಬಣ ಎನ್ನುವ ಕಾರಣಕ್ಕೆ ಮೋಸ ಮಾಡಿದ್ದಾರೆ. ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲದಂತಾಗಿದೆ’ ಎಂದು ದೂರಿದರು.

ADVERTISEMENT

‘ಮಾಜಿ ಶಾಸಕ ಹೂಲಗೇರಿ ಅವರು ಹಾಗೂ ಗೋವಿಂದ ನಾಯಕ, ಹಮ್ಮದ್ ಬಾಬಾ, ಅಧ್ಯಕ್ಷ ಎನಿಸಿಕೊಂಡವರು ಒಂದು ದಿನವೂ ಸದಸ್ಯರ ಸಭೆ ನಡೆಸಿಲ್ಲ, ಇಂತವರು ಅಧ್ಯಕ್ಷರಾಗಿದ್ದಾರೆ’ ಎಂದರು.

‘ಅಮರೇಗೌಡ ಬಯ್ಯಾಪೂರ, ಹಾಗೂ ಶರಣುಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ಡಿ.ಎಸ್.ಹೂಲಗೇರಿ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ಹೈಕಮಾಂಡ್‌ಗೆ ಪತ್ರ ಬರೆಯಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.