
ಸಿರವಾರ: ತಾಲ್ಲೂಕಿನ ಕುರುಕುಂದಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಮರೇಶಗೌಡ ಮಾಲಿಪಾಟೀಲ, ಉಪಾಧ್ಯಕ್ಷರಾಗಿ ಹುಸೇನ್ ಬಾಷಾ ಅವಿರೋಧವಾಗಿ ಆಯ್ಕೆಯಾದರು.
ತಾಲ್ಲೂಕಿನ ಕುರುಕುಂದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಗುರುವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ 2 ಸ್ಥಾನಕ್ಕೆ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆ ನಡೆಯಿತು. ಚುನಾವಣಾ ಅಧಿಕಾರಿ ಶ್ರೀನಿವಾಸ ಅವಿರೋಧ ಘೋಷಣೆ ಮಾಡಿ ಪ್ರಮಾಣ ಪತ್ರ ವಿತರಿಸಿದರು.
ಸಂಘದ ನಿರ್ದೇಶಕ ವೀರನಗೌಡ ಕುರಕುಂದಾ, ನಾಗಪ್ಪ ಕುರಕುಂದಾ, ಬಸಲಿಂಗಪ್ಪ ಹೀರಾ, ಧನಂಜಯ ಹೀರಾ, ಗಂಗಪ್ಪ ಕುರಕುಂದಾ, ಗಂಗಮ್ಮ ಕುರಕುಂದಾ, ರಂಗಪ್ಪ ಕುರಕುಂದಾ, ಕೆಂಚಣ್ಣ ಹೀರಾ, ಶೇಷಮ್ಮ ಕುರಕುಂದಾ, ಶಿವರಾಜ ಕುರಕುಂದಾ ಪಿಕೆಪಿಎಸ್‌ನ ಸಿಬ್ಬಂದಿ ಮರಿಬಸನಗೌಡ, ಶಿವಲಿಂಗಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.