ADVERTISEMENT

ಅಂಬೇಡ್ಕರ್ 130ನೇ ಜಯಂತಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 10:55 IST
Last Updated 14 ಏಪ್ರಿಲ್ 2021, 10:55 IST
ಸಿರವಾರದ ಇಂದಿರಾ ನಗರ ವೃತ್ತದಲ್ಲಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕಕ್ಕೆ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಮಾಲಾರ್ಪಣೆ ಮಾಡುವ ಮೂಲಕ ಅವರ ಜಯಂತಿ ಆಚರಿಸಿದರು
ಸಿರವಾರದ ಇಂದಿರಾ ನಗರ ವೃತ್ತದಲ್ಲಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕಕ್ಕೆ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಮಾಲಾರ್ಪಣೆ ಮಾಡುವ ಮೂಲಕ ಅವರ ಜಯಂತಿ ಆಚರಿಸಿದರು   

ಸಿರವಾರ: ಪಟ್ಟಣದ ಇಂದಿರಾ ನಗರ ವೃತ್ತದಲ್ಲಿನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನಾಮಫಲಕಕ್ಕೆ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಮಾಲಾರ್ಪಣೆ ಮಾಡುವ ಮೂಲಕ ಅವರ ಜಯಂತಿ ಆಚರಿಸಿದರು.

ಉಪನ್ಯಾಸಕ ಶಿವುಕುಮಾರ ಕಲ್ಲೂರು ಮಾತನಾಡಿ, ’ಸಂವಿಧಾನ ಭಾರತದ ಪವಿತ್ರ ಗ್ರಂಥ. ಇದು ನಮ್ಮ ಬದುಕಿಗೂ ದಾರಿ. ಈ ಪವಿತ್ರ ಗ್ರಂಥದ ಮೂಲಕ ಪ್ರಜಾಪ್ರಭುತ್ವಕ್ಕೊಂದು ಅರ್ಥ ಕಲ್ಪಿಸಿದವರು ಅಂಬೇಡ್ಕರ್ ಅವರು’ ಎಂದು ಹೇಳಿದರು.

ಅಬ್ರಹಾಂ ಹೊನ್ನಟಗಿ, ಜೆ.ಶರಣಪ್ಪ ಬಲ್ಲಟಗಿ, ಸುರೇಶ ಹೀರಾ, ಕೃಷ್ಣ ನಾಯಕ, ಮೆಶಾಕ್, ಡಿ.ಎಚ್.ಭೀಮಣ್ಣ ಮಾತನಾಡಿದರು.

ನವಲಕಲ್ಲು ಬೃಹ್ಮಠದ ಅಭಿನವಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ನಾಗರಾಜ ಬಿ.ಆರ್.ಪಾಟೀಲ್, ರಾಜಪ್ಪ ಹೊನ್ನಟಗಿ, ತಿಮ್ಮಣ್ಣ ಕಟ್ಟಿಮನಿ, ಮಾರ್ಕಪ್ಪ, ಅಜಿತ್ ಹೊನ್ನುಟಗಿ, ಪಾರ್ಥ, ವಿಜಯಕುಮಾರ ಶಾಂತಪ್ಪ ಪಿತಗಲ್,ಗುಂಡಪ್ಪ, ಎಂ.ಮನೋಹರ, ಪ್ರಕಾಶ, ರಮೇಶ ಭಂಡಾರಿ, ಎಂ.ಪ್ರಕಾಶಪ್ಪ ಸೇರಿದಂತೆ ದಲಿತ ಮುಖಂಡರು, ವಿವಿಧ ಸಮಾಜ ಮುಖಂಡರು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.