ಹಟ್ಟಿ ಚಿನ್ನದ ಗಣಿ: ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಯೋಜನೆ ಉಳಿಸಿಕೊಳ್ಳಲು ಜನರ ಮೇಲೆ ಸರ್ಕಾರ ಬರೆ ಎಳೆಯುತ್ತಿದೆ’ ಎಂದು ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೇಂದ್ರ ಮತ್ತು ರಾಜ್ಯ ಪುರಸ್ಕೃತ ಅಮೃತ್ 2.0.ಯೋಜನೆ ಅಡಿಯಲ್ಲಿ ₹31.47.ಕೋಟಿ ಅನುದಾನದಲ್ಲಿ ಕುಡಿಯುವ ನೀರು ಸರಬರಾಜು ಪೈಪ್ ಲೈನ್ ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಅವರು ಮಾತನಾಡಿದರು.
ಹಟ್ಟಿ, ಮುದುಗಲ್, ಲಿಂಗಸುಗೂರು ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಲಾಗುವುದು. ಲಿಂಗಸುಗೂರಿನಲ್ಲಿ ₹80 ವೆಚ್ಚದಲ್ಲಿ ಪೈಪ್‌ಲೈನ್ ಕಾಮಗಾರಿ ನಡೆಯುತ್ತಿದೆ’ ಎಂದರು.
ಹಟ್ಟಿ ಪಟ್ಟಣದಲ್ಲಿ ಸಂಘಟನೆ ಕೊರತೆಯಿಂದ ಅಭಿವೃದ್ಧಿಯಾಗುತ್ಲಿಲ್ಲ. ಪಕ್ಷ ಬೇಧ ಮರೆತು ಅಭಿವೃದ್ದಿಗೆ ಕೈಜೋಡಿಸಿಸಬೇಕಿದೆ. ಎಲ್ಲರ ಸಹಕಾರ ಅಗತ್ಯ ಎಂದರು.
ಎಇಇ ಗುರುರಾಜ ಮಾತನಾಡಿ, ‘ಹಟ್ಟಿ ಪಟ್ಟಣದಲ್ಲಿ 72 ಕಿ.ಮೀ ಹೊಸ ಪೈಪ್‌ಲೈನ್ ಅಳವಡಿಸಿ 4,200 ಹೊಸ ನಳಗಳನ್ನು ನೀಡಿ ಪ್ರತಿಯೊಬ್ಬ ವ್ಯಕ್ತಿಗೆ 135 ಲೀ ನೀರು ಒದಗಿಸುವ ಯೋಜನೆ ಇದು‘ ಎಮದರು.
ಈ ವೇಳೆ ಜಿಜೆಪಿ ಜಿಲ್ಲಾಧ್ಯಕ್ಚ ವೀರನಗೌಡ ಲೆಕ್ಕಿಹಾಳ, ಪ.ಪಂ ಅಧ್ಯಕ್ಷ ಎಂಡಿ ಸಂಧಾನಿ, ಉಪಾಧ್ಯಕ್ಷೆ ನಾಗರತ್ನ ಗುರಿಕಾರ, ಮುಖಂಡರಾದ ಭೂಪನಗೌಡ ಕಡಕಲ್, ಪಾಮಯ್ಯ ಮೂರಾರಿ, ಪ.ಪಂ ಸದಸ್ಯೆ ವಿಜ್ಜಮ್ಮ, ಶಂಕರಗೌಡ ಬಳಗಾನೂರು, ಎನ್.ಸ್ವಾಮೀ, ಪ.ಪಂ ಮುಖ್ಯಾಧಿಕಾರಿ ಜಗನಾಥ ಜೋಶಿ, ಜೆಇ,ಚಂದ್ರಕಾಂತ, ಜೂಲಪ್ಪ ನಾಯಕ, ರಮೇಶ ಶ್ರ, ಶಿವಪ್ರಸದಾ, ಸಿರಾಜುದ್ದಿನ್, ಬಾಬು ನಾಯಿಕೊಡಿ ಉಪಸ್ಧಿತರಿದ್ದರು
₹56 ಸಾವಿರ ಕೋಟಿ ಹೊರೆ’:
ಎಂಎಲ್‌ಸಿ ಶರಣುಗೌಡ ಪಾಟೀಲ ಬಯ್ಯಾಪೂರ ಮಾತನಾಡಿ ‘ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ₹56 ಸಾವಿರ ಕೋಟಿ ಹೊರೆಯಾಗಿರುವುದು ನಿಜ. ಆದರೆ ಅಭಿವೃದ್ದಿ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಈಗಾಗಲೇ ಪ್ರತಿಯೊಬ್ಬ ಶಾಸಕರಿಗೆ ಅಭಿವೃದ್ದಿಗಾಗಿ ₹30 ಕೋಟಿ ಅನುದಾನ ನೀಡಲಾಗಿದೆ. ವಿರೋದ ಪಕ್ಷದ ಶಾಸಕರಿಗೆ ₹25 ಕೋಟಿ ಅನುದಾನ ನೀಡಲಾಗಿದೆ’ ಎಂದು ತಿಳಿಸಿದರು. ‘ಟಣಮಕಲ್ಲು ಗ್ರಾಮದಿಂದ ಹಟ್ಟಿ ಪಟ್ಟಣಕ್ಕೆ ಕುಡಿಯುವ ನೀರಿನ ಪೈಪ್‌ಲೈನ್ ಹಾಕಿ ಜನರ ಸಮಸ್ಯೆ ಬಗೆಹರಿಸಿ’ ಎಂದು ಶಾಸಕರಿಗೆ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.