ADVERTISEMENT

ಅಂತರರಾಜ್ಯ ದರೋಡೆಕೋರರ ಬಂಧನ

3 ದರೋಡೆ ಪ್ರಕರಣ ಬೇಧಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 7:12 IST
Last Updated 28 ನವೆಂಬರ್ 2022, 7:12 IST
ಸಿಂಧನೂರು ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಮೂರು ದರೋಡೆ ಪ್ರಕರಣಗಳನ್ನು ಬೇಧಿಸಿ ಆರೋಪಿತರನ್ನು ಬಂಧಿಸಿ, ನಗದು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವ ಕುರಿತು ಮಾಹಿತಿ ನೀಡಿದರು
ಸಿಂಧನೂರು ಪೊಲೀಸ್ ಠಾಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಅವರು ಮೂರು ದರೋಡೆ ಪ್ರಕರಣಗಳನ್ನು ಬೇಧಿಸಿ ಆರೋಪಿತರನ್ನು ಬಂಧಿಸಿ, ನಗದು, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವ ಕುರಿತು ಮಾಹಿತಿ ನೀಡಿದರು   

ಸಿಂಧನೂರು: ಸಿಂಧನೂರು ನಗರ, ತುರ್ವಿಹಾಳ ಹಾಗೂ ಜಿಲ್ಲೆಯ ಕವಿತಾಳ ಗ್ರಾಮಗಳಲ್ಲಿ ನಡೆದಿದ್ದ ಮೂರು ದರೋಡೆ ಪ್ರಕರಣಗಳನ್ನ ಜಿಲ್ಲೆಯ ಪೊಲೀಸರು ಬೇಧಿಸಿದ್ದಾರೆ. ಆರೋಪಿತರನ್ನು ಬಂಧಿಸಿ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳ ಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಖಿಲ್ ಬಿ. ತಿಳಿಸಿದರು.

ನಗರದ ಶಹರ್‌ ಪೊಲೀಸ್ ಠಾಣೆಯಲ್ಲಿ ಭಾನುವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ನವೆಂಬರ್ 7ರಂದು ಗಾಂಧಿನಗರದ ಭಾಸ್ಕರರಾವ್ ಅವರ ಮನೆಗೆ ಮೂವರು ದರೋಡೆಕೋರರು ನುಗ್ಗಿ ₹18 ಲಕ್ಷ ನಗದು, ₹6.75 ಲಕ್ಷ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿರುವ ಕುರಿತು ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್ಪಿ ಆರ್.ಶಿವಕುಮಾರ, ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐಗಳಾದ ರವಿಕುಮಾರ ಎಸ್.ಕಪ್ಪತ್ತನವರ್, ಶಶಿಕಾಂತ, ಪಿಎಸ್‍ಐಗಳಾದ ಚಂದ್ರಪ್ಪ, ವಿರೂಪಾಕ್ಷಪ್ಪ, ಯರಿಯಪ್ಪ, ಸೌಮ್ಯ, ಸದ್ದಾಂ ಹುಸೇನ್, ಬಸವರಾಜ ಎಚ್ ಒಳಗೊಂಡು ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ವಿಶೇಷ ಕಾರ್ಯಾಚರಣೆ ಮೂಲಕ ಆರೋಪಿತರಾದ ಆಂಧ್ರಪ್ರದೇಶದ ರಾಮಕೃಷ್ಣರಾಜು, ಕುಮಾರ್ ರಾಜು, ಅರ್ಧಾನಿ ಲಕ್ಷ್ಮಣ, ಸುಜಾತಾ ಅವರನ್ನು ಬಂಧಿಸಿದೆ ಎಂದು ಅವರು ತಿಳಿಸಿದರು.

ADVERTISEMENT

ಬಂಧಿತರಿಂದ ತುರ್ವಿಹಾಳ ಠಾಣಾ ವ್ಯಾಪ್ತಿಯಲ್ಲಿ 220 ಗ್ರಾಂ ಬಂಗಾರ ಆಭರಣ, ಒಂದು ಕಾರು, ನಗರ ಠಾಣಾ ವ್ಯಾಪ್ತಿಯ 60 ಗ್ರಾಂ ಬಂಗಾರ ಆಭರಣ, ₹15 ಸಾವಿರ ನಗದು, ಕವಿತಾಳ ಠಾಣಾ ವ್ಯಾಪ್ತಿಯ ₹1 ಲಕ್ಷ ನಗದು, 240 ಗ್ರಾಂ ಬಂಗಾರ ಆಭರಣ, ಒಂದು ಕಾರು ಒಟ್ಟು ಎಲ್ಲಾ ಪ್ರಕರಣಗಳು ಸೇರಿ ಒಟ್ಟು ₹26 ಲಕ್ಷ ಮೌಲ್ಯದ 520 ಗ್ರಾಂ ಬಂಗಾರದ ಆಭರಣಗಳು ಮತ್ತು ₹1.15 ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ ₹2 ಲಕ್ಷ ಮೌಲ್ಯದ ಮತ್ತು ₹1.50 ಲಕ್ಷ ಮೌಲ್ಯದ ಕಾರುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.

ತುರ್ವಿಹಾಳ ಠಾಣೆ ವ್ಯಾಪ್ತಿಯ ಗಾಂಧಿನಗರ ದರೋಡೆ ಪ್ರಕರಣದ 4ನೇ ಆರೋಪಿ ಸುಜಾತಾ ಸಿಂಧನೂರಿನ ಆದರ್ಶ ಕಾಲೊನಿ, ಮಾನ್ವಿ ಮತ್ತು ರಾಯಚೂರು ನಗರದಲ್ಲಿ ಮನೆ ಮಾಡಿದ್ದು, ಈಕೆಯು ತನ್ನ ಪರಿಚ ಯಸ್ಥರನ್ನು ಮಹಿಳೆಯರನ್ನು ಕರೆಯಿಸಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಳು. ಸಂಪರ್ಕದಲ್ಲಿ ರುವ ಜನರ ದೊಡ್ಡ ದೊಡ್ಡ ಮನೆಗಳನ್ನು ಪಟ್ಟಿ ಮಾಡಿ ಅವುಗಳ ಕುರಿತು ಬಂಧಿತ ಆರೋಪಿಗಳಿಗೆ ಮಾಹಿತಿ ನೀಡುತ್ತಿದ್ದಳು. ಆರೋಪಿಗಳು ಅಂತಹ ಮನೆಗಳನ್ನು ದರೋಡೆ ಮಾಡುತ್ತಿದ್ದರು. ಈ ಬಗ್ಗೆ ತನಿಖೆಯಲ್ಲಿ ಅವರು ಒಪ್ಪಿಕೊಂಡಿದ್ದಾರೆ. ಪ್ರಕರಣಗಳನ್ನು ಬೇಧಿಸಿದ ತಂಡಕ್ಕೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಹುಮಾನ ಘೋಷಿಸಲಾಗಿದೆ ಎಂದು ಎಸ್‍ಪಿ ನಿಖಿಲ್ ತಿಳಿಸಿದರು.

ಎಎಸ್‍ಪಿ, ಡಿವೈಎಸ್‍ಪಿ, ಸಿಪಿಐಗಳು, ಪಿಎಸ್‌ಐಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.