ADVERTISEMENT

ಎಟಿಎಂ ನಕಲು ಮಾಡಿ ಹಣ ಡ್ರಾ; ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 15:15 IST
Last Updated 20 ಜೂನ್ 2020, 15:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ರಾಯಚೂರು: ನಕಲಿ ಎಟಿಎಂ ಬಳಸಿ ಉಳಿತಾಯ ಖಾತೆಯಿಂದ ಹಣ ದೋಚುತಿದ್ದ ಪ್ರಕರಣವನ್ನು ಭೇದಿಸಿರುವ ರಾಯಚೂರು ಸೈಬರ್‌ ಪೊಲೀಸರು ಉತ್ತರ ಪ್ರದೇಶದ ಇಬ್ಬರು ಆರೋಪಿಗಳನ್ನು ಸೈಬರ್ ಬಂಧಿಸಿದ್ದಾರೆ.

ಜಿಲ್ಲೆಯ ಸೈಬರ್ ಪೊಲೀಸ್ ಠಾಣೆಯಲ್ಲಿ ಎಟಿಎಂ ಕಳ್ಳತನದ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ ಅರೋಪಿ ಹರಿಲಾಲ್ ಹಾಗೂ ಬ್ರಿಜವಾನ್ ಬಲೆಗೆ ಬಿದ್ದಿದ್ದಾರೆ. ಇವರ ತಂಡ ಕಳೆದ ಹಲವಾರು ದಿನಗಳಲ್ಲಿ ರಾಜ್ಯದ ಹಲವೆಡೆ ಈ ರೀತಿ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಎಟಿಎಂ ನಕಲು ಮಾಡಿ ಉಳಿತಾಯ ಖಾತೆಯಿಂದ ಒಟ್ಟು ₹2,81,069 ಹಣ ಡ್ರಾ ಮಾಡಿಕೊಂಡಿದ್ದಾರೆ.

ಸಾರ್ವಜನಿಕರು ಎಚ್ಚರಿಕೆಯಿಂದ ತಮ್ಮ ಎಟಿಎಂ ಇಟ್ಟುಕೊಳ್ಳಬೇಕು. ಒಂದುವೇಳೆ ಕಳೆದು ಹೋದಲ್ಲಿ ಕೂಡಲೇ ಬ್ಯಾಂಕ್‌ಗೆ ಮಾಹಿತಿ ನೀಡಿ ಲಾಕ್ ಮಾಡಿಸಬೇಕು. ಆನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.