ADVERTISEMENT

‘ಅಭಿಯಾನ ಯಶಸ್ವಿಗೆ ಸಹಕರಿಸಿ’

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 8:43 IST
Last Updated 13 ಡಿಸೆಂಬರ್ 2019, 8:43 IST
ಲಿಂಗಸುಗೂರು ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಈಚೆಗೆ ವಿಶೇಷ ಶಾಲಾ ಲಸಿಕೆ ಅಭಿಯಾನಕ್ಕೆ ಉಪ ವಿಭಾಗಾಧಿಕಾರಿ ಚಾಲನೆ ನೀಡಿದರು
ಲಿಂಗಸುಗೂರು ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ ಈಚೆಗೆ ವಿಶೇಷ ಶಾಲಾ ಲಸಿಕೆ ಅಭಿಯಾನಕ್ಕೆ ಉಪ ವಿಭಾಗಾಧಿಕಾರಿ ಚಾಲನೆ ನೀಡಿದರು   

ಲಿಂಗಸುಗೂರು: ‘ಡಿಫ್ತೀರಿಯಾ ನಿಯಂತ್ರಣಕ್ಕೆ 5 ರಿಂದ 16 ವಯೋಮಾನದ ಮಕ್ಕಳಿಗೆ ವಿಶೇಷ ಶಾಲಾ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಭಿಯಾನದ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅವಶ್ಯ’ ಎಂದು ಉಪ ವಿಭಾಗಾಧಿಕಾರಿ ಡಾ. ದಿಲೀಶ್‌ ಸಸಿ ಹೇಳಿದರು.

ಇಲ್ಲಿನ ಸರ್ಕಾರಿ ಕಿರಿಯ ಮಹಾವಿದ್ಯಾಲಯದಲ್ಲಿ (ಪ್ರೌಢಶಾಲೆ ವಿಭಾಗ) ಈಚೆಗೆ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ‘ಇಂದಿನಿಂದ ಡಿಸೆಂಬರ್‌ 31ರ ವರೆಗೆ ಲಸಿಕೆ ಹಾಕಲಾಗುವುದು. ಪ್ರತಿ ಮಗುವಿಗೆ ಲಸಿಕೆ ಹಾಕಿಸುವುದು ಕಡ್ಡಾಯ. ಹೀಗಾಗಿ ಪಾಲಕರು, ಸಂಘ ಸಂಸ್ಥೆಗಳು, ಪ್ರತಿನಿಧಿಗಳು
ಕೂಡ ಜಾಗೃತಿ ಮೂಡಿಸುವ ಜೊತೆಗೆ ಲಸಿಕೆ ಹಾಕಿಸಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ ಮಾತನಾಡಿ, ‘ಪ್ರಾಥಮಿಕ, ಪ್ರೌಢಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ಸಮೀಪದ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಲಾಗಿದೆ. ಗಂಟಲಮಾರಿ, ನಾಯಿಕೆಮ್ಮು ಮತ್ತು ಧನುರ್ವಾಯು ರೋಗವನ್ನು ತಡೆಯವ ಉದ್ದೇಶದಿಂದ ಲಸಿಕೆ
ಹಾಕಲಾಗುತ್ತಿದೆ’ ಎಂದು ಅವರು ಹೇಳಿದರು.

ADVERTISEMENT

ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಜೋಷಿ, ಡಾ.ಸುವರ್ಣ, ಡಾ.ಆಯಿಶಾ ಬಿರಾದರ, ಉಪ ಪ್ರಾಚಾರ್ಯ ಹೊನ್ನಪ್ಪ, ಮೋನಮ್ಮ, ಮುಬಿನಾ, ನಾಗರತ್ನಾ, ಸಚಿನ್‌, ಪ್ರಕಾಶ, ರಾಜಾರಾಮಸಿಂಗ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.